ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳು ರೋಟರಿ ಇಂಟರ್‌ರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ಇವರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದಲ್ಲಿ ಆಯೋಜಿಸಿದ ರೋಟರಿ ಯೂತ್ ಲೀಡರ್ಶಿಪ್ ಅವಾರ್ಡ್ RYLA 2026 ರಲ್ಲಿ ಅಧ್ಯಯನ ಭೇಟಿಯ ಭಾಗವಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೋಟರಿ ಕ್ಲಬ್ ನ ಸಮಾಜ ಸೇವೆಯ ವಿವಿಧ ಮಜಲುಗಳ ಬಗ್ಗೆ ಮಾಹಿತಿ ಪಡೆದು, ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಜೊತೆ ರೋಟರಿ ಕ್ಲಬ್ನ ಅಧ್ಯಕ್ಷರಾದ ರೋ. ಸತೀಶ್ ಹೆಗ್ಡೆ, ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ ಕೊಡ್ಲಾಡಿ, RYLA ವಲಯ ಸಂಯೋಜಕ ರೋ. ವೆಂಕಟೇಶ್ ನಾವುಂದ ಹಾಗೂ ಕಾಲೇಜಿನ ರೋಟರಿ ಕ್ಲಬ್ ನ ಸಂಯೋಜಕರಾದ ಶ್ರೀಮತಿ ವಿನಯಾ ವಿ. ಶೆಟ್ಟಿ, ವಿದ್ಯಾಥಿಗಳು ಉಪಸ್ಥಿತರಿದ್ದರು.
Categories