ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ(ಐಸಿಎಐ) ಮೇ 2026 ರಲ್ಲಿ ನಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಆದಿತ್ಯ ಎಚ್ ಪೆರ್ಗಡೆ ಉತ್ತೀರ್ಣ ರಾಗಿದ್ದು ಗ್ರೂ ಪ್ ಒಂದರಲ್ಲಿFinancial Reporting 68, Advanced Financial Management 70, Advanced Auditing, Assurance and Professional Ethics 67, ಮತ್ತು ಗ್ರೂಪ್ ಎರಡರ Direct Tax Laws & International Taxation 69 , Indirect Tax Laws 74, Integrated Business Solutions 58 ಒಟ್ಟು 406 ಅಂಕಗಳನ್ನು ಗಳಿಸಿ ಆಲ್ ಇಂಡಿಯಾ 47 ನೇ ರ್ಯಾಂಕ್ ನ್ನು ಪಡೆದುಕೊಂಡಿದ್ದಾರೆ.
ಇವರು ಮಂಗಳೂರಿನ ಹರೀಶ್ ಪೆರ್ಗಡೆ ಹಾಗೂ ಶಶಿಕಲಾ ಪೆರ್ಗಡೆ ದಂಪತಿಗಳ ಪುತ್ರ. ತಮ್ಮ ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ಮೀಡಿಯೆಟ್ ತರಬೇತಿಯನ್ನು ಜೊತೆಗೆ ಪದವಿ ಶಿಕ್ಷಣವನ್ನು ತ್ರಿಶಾ ಕಾಲೇಜು ಮಂಗಳೂರಿನಲ್ಲಿ ಪಡೆದುಕೊಂಡಿದ್ದಾರೆ ಮತ್ತು ಆರ್ಟಿಕಲ್‌ಶಿಪ್ ನ್ನು ಗಣೇಶ್ ಮತ್ತು ಸುಧೀರ್, ಮಂಗಳೂರಿನಲ್ಲಿ ಪೂರೈಸಿಕೊಂಡಿದ್ದಾರೆ.
Categories
ಸಿಎ ಫೈನಲ್ : ಆದಿತ್ಯ ಎಚ್ ಪೆರ್ಗಡೆ 47ನೇ ರ್ಯಾಂಕ್