Categories
ಕರಾವಳಿ ಸುದ್ದಿ

ಡಿ.ಕೆ ರಾಧಾಕೃಷ್ಣ ನಿಧನ

ಡಿ.ಕೆ ರಾಧಾಕೃಷ್ಣ ನಿಧನ

ಕುಂದಾಪುರ:ಕುಂದಾಪುರದ ಖಾರ್ವಿಕೇರಿ ನಿವಾಸಿಯಾದ ಧರ್ಮಯಣ  ಕುಟುಂಬದ ದಿವಂಗತ ಡಿ.ಕೆ ವೆಂಕಟೇಶ್ ಮತ್ತು ದಿವಂಗತ ಶ್ರೀಮತಿ ಪದ್ಮಾವತಿ ಇವರ ನಾಲ್ಕನೇ ಪುತ್ರನಾದ ಡಿ.ಕೆ ರಾಧಾಕೃಷ್ಣ ಇವರು ಇಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ ಇವರು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಹಳೆ ವಿದ್ಯಾರ್ಥಿಯಾದ್ದು ಬಿಕಾಂ ಪದವಿ ಪಡೆದಿದ್ದಾರೆ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದು ಉತ್ತರ ಭಾರತ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ  ಮತ್ತು ಕುಂದಾಪುರದಲ್ಲಿ ಸೇವೆ ಸಲ್ಲಿಸಿದ್ದಾರೆ ಇವರಿಗೆ 70 ವರ್ಷ ವಯಸ್ಸಾಗಿದ್ದು ಪತ್ನಿ ಶ್ರೀಮತಿ ಜಯಂತಿ ಮಾಲಾ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ಮಾಧುರಿ ಹಾಗೂ ನಿಶ್ಮಿತ ರವರನ್ನು ಅಗಲಿದ್ದಾರೆ ಡಿ.ಕೆ ರಾಧಾಕೃಷ್ಣ ಇವರು ಕುಂದಾಪುರದ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ.ಕೆ ಪ್ರಭಾಕರ್ ರವರ ಸಹೋದರರಾಗಿದ್ದಾರೆ