Home » 65 ಲಕ್ಷ ರೂಪಾಯಿ ಮೊತ್ತದ ಬೈರಂಪಳ್ಳಿ ಉಪ ಆರೋಗ್ಯ ಕೇಂದ್ರ
 

65 ಲಕ್ಷ ರೂಪಾಯಿ ಮೊತ್ತದ ಬೈರಂಪಳ್ಳಿ ಉಪ ಆರೋಗ್ಯ ಕೇಂದ್ರ

- ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

by Kundapur Xpress
Spread the love

ಕಾಪು  : ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಉಪಾಧ್ಯಕ್ಷರಾದ ಅಮ್ಮಣ್ಣಿ ಶೆಟ್ಟಿ, ಸದಸ್ಯರಾದ ಜಿಯಾನಂದ ಹೆಗಡೆ, ಹರ್ಷಿತ ಕುಮಾರ್, ರಾಧಿಕಾ ಭಟ್, ತಾಲೂಕು ಆರೋಗ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಅರ್ಚನಾ ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.

 

Related Articles

error: Content is protected !!