ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5124
ಶುಭಕೃತ್ ಸಂವತ್ಸರ
ಉತ್ತರಾಯಣ
ಶಿಶಿರ ಋತು ಮಾಘ ಮಾಸ
ಶುಕ್ಲ ಪಕ್ಷ ದ್ವಾದಶಿ ತಿಥಿ
ಪುಷ್ಯ ನಕ್ಷತ್ರ
ಶನಿವಾರ
ಅದೃಷ್ಡ ಸಂಖ್ಯೆ 44 95
ಇಂದಿನ ವಿಶೇಷ
ಕಂಡ್ಲೂರು ಶ್ರೀ ಕನ್ನಿಕಾಪರಮೇಶ್ವರಿ ಗೆಂಡ ಮಹೋತ್ಸವ
ಈ ದಿನ ಎಲ್ಲರಿಗೂ ಶುಭವಾಗಲಿ
ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5124
ಶುಭಕೃತ್ ಸಂವತ್ಸರ
ಉತ್ತರಾಯಣ
ಶಿಶಿರ ಋತು ಮಾಘ ಮಾಸ
ಶುಕ್ಲ ಪಕ್ಷ ದ್ವಾದಶಿ ತಿಥಿ
ಪುಷ್ಯ ನಕ್ಷತ್ರ
ಶನಿವಾರ
ಅದೃಷ್ಡ ಸಂಖ್ಯೆ 44 95
ಇಂದಿನ ವಿಶೇಷ
ಕಂಡ್ಲೂರು ಶ್ರೀ ಕನ್ನಿಕಾಪರಮೇಶ್ವರಿ ಗೆಂಡ ಮಹೋತ್ಸವ
ಈ ದಿನ ಎಲ್ಲರಿಗೂ ಶುಭವಾಗಲಿ
ಆನೆಗುಡ್ಡೆಗೆ ಗಣ್ಯರ ಭೇಟಿ
ಕುಂದಾಪುರ:ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನಕ್ಕೆ ವಿವಿಧ ಗಣ್ಯರು ಭೇಟಿ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು ದಿನಾಂಕ 02.03.23 ರಂದು ಗುರುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾದ ಪ್ರಮೀಳಾ ನಾಯ್ಡು ರವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು
ಇಂದು ಶುಕ್ರವಾರ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಜೀವರಾಜ್ ರವರು ದೇವಳಕ್ಕೆ ಭೇಟಿ ನೀಡಿದರು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಉದ್ಯಮಿ ಪಿ ರಾಮದಾಸ್ ಪೆಡವೆಣ್ಣಾಯರವರು ಭೇಟಿ ನೀಡಿದರು
ದೇವಾಲಯದ ಹಿರಿಯ ಧರ್ಮದರ್ಶಿ ಗಳಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯರು ಆಗಮಿಸಿದ ಗಣ್ಯರನ್ನು ಗೌರವಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು
ನಾಳೆ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಚಿತ್ತೂರು ಶಾಖೆ ಉದ್ಘಾಟನೆ
ಕುಂದಾಪುರ: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ಇದರ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ ನೂತನ ಚಿತ್ತೂರು ಶಾಖೆ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 4 ರಂದು ಬೆಳಗ್ಗೆ 10.35ಕ್ಕೆ ಆಲೂರು ಮೂರುಕೈ ಚಿತ್ತೂರು ಇಲ್ಲಿನ ಸಕಲ ಕನ್ ವೆನ್‍ಶನ್ ಹಾಲ್‍ನಲ್ಲಿ ನಡೆಯಲಿದೆ
ಚಿತ್ತೂರು ಶಾಖೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ವಹಿಸುವರು. ಗೋದಾಮನ್ನು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ವಂಡ್ಸೆ ಹಾಗೂ ಚಿತ್ತೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ| ಅತುಲ್ ಕುಮಾರ್ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಆಡಳಿತ ಮೋಕ್ತೇಸರ ಸಿ. ಸದಾಶಿವ ಶೆಟ್ಟಿ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ. ಎನ್. ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಲಾವಣ್ಯ ಕೆ. ಆರ್. ಉಪಸ್ಥಿತರಿರುವರೆಂದು ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದ್ದಾರೆ.
ಯಶಸ್ಸು ಕಂಡ CEIR PORTAL
ಮಂಗಳೂರು: ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲನ್ನು ಪತ್ತೆ ಹಚ್ಚಲು ರಾಜ್ಯ ಪೋಲೀಸ್ ಇಲಾಖೆಯು ನೂತನವಾಗಿ ಆರಂಭಿಸಿದ CEIR PORTAL ಭಾರಿ ಯಶಸ್ಸು ಕಂಡಿದ್ದು ದ.ಕ. ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ 110 ಫೋನ್ ಗಳನ್ನು ಬ್ಲಾಕ್ ಮಾಡಲಾಗಿದ್ದು 15 ಫೋನ್ ಗಳನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂತಿರುಗಿಸಲಾಗಿದೆ ಈ ನೂತನ ತಂತ್ರಜ್ಙಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದೆಂದು ದ.ಕ.ಪೋಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ ಮೊಬೈಲನ್ನು ಕಳೆದುಕೊಂಡವರು ತಕ್ಷಣ ಹತ್ತಿರದ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ ಸಂಬಂದಿಸಿದ ಮಾಹಿತಿಯನ್ನು CEIR PORTAL ದಾಖಲಿಸಲು ಕೋರಲಾಗಿದೆ
ಅಪಘಾತ ಒಂದು ಸಾವು
ಕಾರ್ಕಳ: ಕಾರ್ಕಳ ಬಸ್ಟ್ಯಾಂಡ್ ನಿಂದ ಅಜೆಕಾರ್ ಮೂಲಕ ಕೇರ್ವಾಶೆಗೆ ಹೊರಟ ಬಸ್ ರಾತ್ರಿ 7.30 ರ ಸುಮಾರಿಗೆ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಯ ಹಿರ್ಗಾನ ಗ್ರಾಮದ ಅತ್ರಿ ಎಸ್ಟೇಟ್ ಸಮೀಪದಲ್ಲಿ ಬಸ್ ನ್ನು ನಿಲ್ಲಿಸಿದ್ದು ಪ್ರಯಾಣಿಕರು ಇಳಿಯುತ್ತಿದ್ದಂತೆ ಬೈಕ್ ಸವಾರ ಮನೋಹರ್ ಎಂಬವರು ಬಸ್ಸಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಅವರನ್ನು ಕಾರ್ಕಳ ಸರಕಾರಿ ಅಸ್ಪತ್ರೆ ಕರೆತಂದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು ಕಾರ್ಕಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
CEIR PORTAL ಬಗ್ಗೆ ಮೆಚ್ಚುಗೆ
ಕಳೆದು ಹೋದ ಅಥವಾ ಕಳ್ಳತನವಾದ ಮೊಬೈಲ್ ಬಗ್ಗೆ ಚಿಂತಿಸಬೇಡಿ
ಬ್ಲಾಕ್ ಮಾಡುವ ವಿಧಾನ:
* KSP ಮೊಬೈಲ್ ಆಪ್ಲಿಕೇಶನ್‍ಗೆ ಹೋಗಿ ಮತ್ತು ಇ-ಲಾಸ್ಟ್ ದೂರನ್ನು ನೋಂದಾಯಿಸಿ ಮತ್ತು ಇ-ಅಕ್ನಾಲೆಡ್ಜ್‍ಮೆಂಟ್ ಪಡೆಯಿರಿ.
* ಒಟಿಪಿ ಪಡೆಯಲು ಸಂಬಂಧಿತ ಸೇವಾ ಪೂರೈಕೆದಾರರಿಂದ ನಕಲಿ ಸಿಮ್ ತೆಗೆದುಕೊಳ್ಳಿ ಮತ್ತು ಸಿಮ್ ಅನ್ನು ಸಕ್ರಿಯಗೊಳಿಸಿ.
* CEIR ನ https://ceir.gov.in ಲಾಗಿನ್ ಆಗಿ.
* ಸೋಲ್ಟನ್ / ಲಾಸ್ಟ್ ಮೊಬೈಲ್ ಮೇಲೆ ಕ್ಲಿಕ್ ಮಾಡಿ.
* ಮೊಬೈಲ್ ಸಂಖ್ಯೆ, IMEI ಸಂಖ್ಯೆ, ಬ್ರಾಂಡ್, ಮಾದರಿ ಇತ್ಯಾದಿಗಳಂತಹ ಮಾಹಿತಿಯನ್ನು ಭರ್ತಿಮಾಡಿ.
* ಸ್ಥಳ, ಪೋಲಿಸ್ ದೂರು ಸಂಖ್ಯೆ ಮುಂತಾದ ಕಳೆದುಹೋದ / ಕಳುವಾದ ಮಾಹಿತಿಯನ್ನು ಇ – ಲಾಸ್ಟ್ ರೆಫೆರೆನ್ಸ್ ಐಡಿಯಾಗಿ ಭರ್ತಿ ಮಾಡಿ ಮತ್ತು
ಇ – ಅಕ್ನಾಲೆಡ್ಜ್‍ಮೆಂಟ್ ಅನ್ನು ಅಪ್‍ಲೋಡ್ ಮಾಡಿ.
* ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ.
* ನಿಮ್ಮ ವಿನಂತಿಯು ಪ್ರಕ್ರಿಯೆಗೊಳ್ಳುತ್ತದೆ ಮತ್ತು ಉಲ್ಲೇಖ ಐಡಿಯನ್ನು ನೀವು ಪಡೆಯುತ್ತೀರಿ.
24 ಗಂಟೆಗಳ ಒಳಗೆ ನಿಮ್ಮ ಕಳೆದುಹೋದ / ಕಳುವಾದ ಮೊಬೈಲ್ ಬ್ಲಾಕ್ ಆಗುತ್ತದೆ.
* ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ ನಂತರ ಅದು ದುರುಪಯೋಗವಾಗುವುದಿಲ್ಲ. ಯಾರಾದರೂ ನಿಮ್ಮ ಮೊಬೈಲ್ ಅನ್ನು ಬಳಸಲು ಪ್ರಯತ್ನಿಸಿದಲ್ಲಿ ಅದರ ಮಾಹಿತಿಯನ್ನು ನೀವು ಪಡೆಯುತ್ತೀರಿ.
* ನಿಮ್ಮ ಮೊಬೈಲ್ ಪತ್ತೆಯಾದಲ್ಲಿ ಮತ್ತೊಮ್ಮ CEIR ವೆಬ್‍ಸೈಟ್‍ಗೆ ಹೋಗಿ ಅನ್‍ಬ್ಲಾಕ್ ಮಾಡಬಹುದು.
ಇಂದು ಪ್ರತಿಷ್ಠಾಪನಾ ವರ್ಧಂತ್ಯೋತ್ಸವ
ಪಂಡುಮನೆ ಆಗರಕಟ್ಟೆ ಶ್ರೀ ಪ್ರಸನ್ನಃ ಬೊಬ್ಬರ್ಯ ಹಾಗೂ ಸಪರಿವಾರ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಇಂದು ಜರುಗಲಿದೆ ಬೆಳಿಗ್ಗೆ 10 ಗಂಟೆಗೆ ಪ್ರಸನ್ನಪೂಜೆ, ದುರ್ಗಾಹೋಮ, ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಂದ ಖಾರ್ವಿಕೇರಿಯ ಶ್ರೀ ನಾಗಜಟ್ಟಿಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಸಂಜೆ 7 ರಿಂದ ಕೋಣಿಯ ಮಂಜುಷಾ ಭಜನಾ ಮಂಡಳಿಯವರಿಂದ ಚಂಡೆ ಮತ್ತು ಕುಣಿತ ಭಜನೆ ನಡೆಯಲಿರುವುದು ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನಂಬಿದ ಭಕ್ತರು ಹಾಗೂ ಕುಂದಾಪುರ ಪಂಡುಮನೆ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.
ಕೊನೆಗಾಲದಲ್ಲಿ ದೇವರ ನಾಮವನ್ನೇ ಏಕೆ ಸ್ಮರಿಸಬೇಕು? ಹಾಗೆ ಮಾಡದಿದ್ದರೆ ಏನಾಗುತ್ತದೆ? ಜೀವನದ ಉದ್ದಕ್ಕೂ ದೇವರನ್ನು ನೆನೆಯದವರು ಕೊನೆಗಾಲದಲ್ಲಿ ನೆನೆದ ಮಾತ್ರಕ್ಕೆ ದೇವರ ಪದತಲವನ್ನು ಸೇರುತ್ತಾರೆ ಎಂದು ಹೇಳುವುದಕ್ಕೆ ಏನು ಆಧಾರ? ಈ ಬಗೆಯ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ ಆಗಿದೆ. ಜೀವನದ ಉದ್ದಕ್ಕೂ ದೇವರನ್ನು ನೆನೆಯದವರಿಗೆ ಕೊನೆಗಾಲದಲ್ಲಿ ಮಾತ್ರವೇ ದೇವರನ್ನು ಸ್ಮರಿಸುವುದು ಸುಲಭ ಸಾಧ್ಯವೆಂದು ತಿಳಿಯುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಅಭ್ಯಾಸ ಬಲದಿಂದ ಮಾತ್ರವೇ ಸದ್ಗುಣಗಳನ್ನು ರೂಢಿಸಿಕೊಳ್ಳುವುದು ಸಾಧ್ಯ. ಪ್ರಯತ್ನಶೀಲರಾಗದೇ ಜೀವನದಲ್ಲಿ ರೂಢಿಸಿಕೊಳ್ಳಲು ಸಾಧ್ಯವಾಗುವುದು ದುರ್ಗುಣಗಳನ್ನು ಮಾತ್ರ. ಉತ್ತಮ ಹವ್ಯಾಸಗಳನ್ನು ಮತ್ತು ದುಶ್ಚಟಗಳ ನಡುವಿನ ಅಂತರವೇ ಇದು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಕಷ್ಟ. ಅದಕ್ಕೆ ನಿರಂತರ ಪ್ರಯತ್ನ ಮತ್ತು ಶ್ರದ್ಧೆ ಬೇಕು. ಹಾಗೆಂದು ಹಾಗೆಂದು ಆ ಒಳ್ಳೆಯ ಹವ್ಯಾಸಗಳನ್ನು ಬಿಟ್ಟುಬಿಡಲು ಕಷ್ಟವೇನೂ ಆಗದು. ಆದರೆ ದುರಭ್ಯಾಸ–ದುಶ್ಚಟಗಳು ಹಾಗಲ್ಲ. ಅವುಗಳನ್ನು ಯಾವ ಪ್ರಯತ್ನವಿಲ್ಲದೆಯೂ ಮೈಗೂಡಿಸಿಕೊಳ್ಳಬಹುದು. ಆದರೆ ಒಮ್ಮೆ ಅಂಟಿಕೊಂಡರೆ ಮತ್ತೆ ಅವುಗಳನ್ನು ಬಿಟ್ಟುಬಿಡುವುದು ಎಷ್ಟು ಮಾತ್ರಕ್ಕೂ ಸುಲಭವಲ್ಲ. ಅದಕ್ಕೆ ನೂರುಪಟ್ಟು ಪ್ರಯತ್ನ ಬೇಕು! ದೇವರ ನಾಮ ಸ್ಮರಣೆ ಮಾಡುವುದಕ್ಕೆ ನಿರಂತರ ಅಭ್ಯಾಸ ಬೇಕು. ಶ್ರದ್ಧೆ ಬೇಕು. ಬದುಕಿನ ಉದ್ದಕ್ಕೂ ಅನೂಚಾನವಾಗಿ ಈ ಅಭ್ಯಾಸ ನಡೆಯದಿದ್ದರೆ ಕೊನೆ ಗಾಲದಲ್ಲಿ ದೇವರ ನಾಮ ಬಾಯಿಯಲ್ಲಿ ಮೂಡಿಬರುವುದಾದರೂ ಹೇಗೆ?
ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5124
ಶುಭಕೃತ್ ಸಂವತ್ಸರ
ಉತ್ತರಾಯಣ
ಶಿಶಿರ ಋತು ಮಾಘ ಮಾಸ
ಶುಕ್ಲ ಪಕ್ಷ ಎಕಾದಶಿ ತಿಥಿ
ಪುನರ್ವಸು ನಕ್ಷತ್ರ
ಶುಕ್ರವಾರ
ಅದೃಷ್ಡ ಸಂಖ್ಯೆ 23 72
ಇಂದಿನ ವಿಶೇಷ
ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೈವಸ್ಥಾನ
ಪ್ರತಿಷ್ಠಾ ವರ್ಧಂತ್ಯೋತ್ಸವ
ಪಂಡುಮನೆ ಶ್ರೀ ಪ್ರಸನ್ನ ಬೊಬ್ಬರ್ಯ ಹಾಗೂ
ಸಪರಿವಾರ ದೈವಸ್ಥಾನ ಪ್ರತಿಷ್ಠಾ ವರ್ಧಂತ್ಯೋತ್ಸವ
ಬಸ್ರೂರು ನಂದಿಕೇಶ್ವರ ದೈವಸ್ಥಾನ ಗೆಂಡ
ಈ ದಿನ ಎಲ್ಲರಿಗೂ ಶುಭವಾಗಲಿ
ವಿದ್ಯುತ್ ಶಾಕ್ ದುರ್ಮರಣ
ಕುಂದಾಪುರ: ಗಂಗೊಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡಾ ಗ್ರಾಮದ ಕೋಣ್ಕಿ ಎಂಬಲ್ಲಿ ಭುಜಂಗ ಶೆಟ್ಟಿ (59 ವರ್ಷ) ಎಂಬವರಿಗೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ
ನಾಡಾ ಗ್ರಾಮದ ಕೋಣ್ಕಿ ಅಂಗಡಿಬೆಟ್ಟು ಮನೆಯ ನಿವಾಸಿಯಾದ ಭುಜಂಗ ಶೆಟ್ಟಿ ಯವರು ಕಬ್ಬಿಣದ ಪೈಪ್ ಗೆ ಕತ್ತಿಯನ್ನು ಕಟ್ಟಿಕೊಂಡು ತೋಟದಲ್ಲಿ ಅಡಿಕೆ ಕೊಯ್ಯುತ್ತಿರುವಾಗ ತೋಟದಲ್ಲಿ ಹಾದುಹೋಗಿರುವ ಹೈಟೆನ್ಶನ್ ತಂತಿಗೆ ತಾಗಿ ಕಬ್ಬಿಣದ ಪೈಪ್ ಮೂಲಕ ವಿದ್ಯುತ್ ಪ್ರವಹಿಸಿದ್ದರಿಂದ ಭಾಗಶ: ಸುಟ್ಟು ಹೋಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಗುಲಾಬಿ ಶೆಡ್ತಿ ಯವರು ನೀಡಿದ ದೂರಿನನ್ವಯ ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ