ಕೋಟ : ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಚಿತ್ರನಟ ರಕ್ಷಿತ್ ಶೆಟ್ಟಿ ಭೇಟಿ ನೀಡಿದರು.
ಈ ವೇಳೆ ದೇಗುಲದ ಆಡಳಿತ ಮಂಡಳಿಯ ಸದಸ್ಯ ಸುಭಾಷ್ ಶೆಟ್ಟಿ ಶಾಲು ಹೋದಿಸಿ ಪ್ರಸಾದ ನೀಡಿ ಗೌರವಿಸಿದರು.
ದೇಗುಲದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,ಕೋಟ ಗ್ರಾಮಲೆಕ್ಕಿಗ ಚಲುವರಾಜು, ಆಡಳಿತ ಮಂಡಳಿಯ ಸದಸ್ಯರಾದ ಸುಧಾ ಎ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್,ಅರ್ಚಕ ಪ್ರತಿನಿಧಿ ಅಶ್ವಥ್ ಜೋಗಿ,ಕೋಟ ಪಂಚಾಯತ್ ಮಾಜಿ ಸದಸ್ಯ. ರವೀಂದ್ರ ಜೋಗಿ,ಸ್ಥಳೀಯರಾದ ದೇವೇಂದ್ರ ಗಾಣಿಗ,ಭರತ್ ಗಾಣಿಗ ,ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು
ಪ್ರಧಾನಿ ನರೇಂದ್ರ ಮೋದಿ ನಾಗ್ಪುರದ ದೀಕ್ಷಭೂಮಿಗೆ ಭೇಟಿ ನೀಡಿದ್ದಾರೆ. 1956 ರಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡ ಸ್ಥಳ ಇದಾಗಿದೆ. ದೀಕ್ಷಭೂಮಿಯಲ್ಲಿರುವ ಬುದ್ಧನ ಪ್ರತಿಮೆಗೂ ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು. ದೀಕ್ಷಭೂಮಿಯ ಸನ್ಯಾಸಿಗಳು ಪ್ರಧಾನ ಮಂತ್ರಿಯವರಿಗೆ ಪುಷ್ಪಗುಚ್ಛ ಮತ್ತು ಶಾಲು ನೀಡಿ ಸನ್ಮಾನಿಸಿದರು.
ಅವರ ಜೊತೆ ಆರ್‌ಎಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು