Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಮಾಘ : ಮಾಸ

ಶುಕ್ಲ ಪಕ್ಷ

ದ್ವಾದಶಿ : ತಿಥಿ

ಆರ್ದ್ರೆ : ನಕ್ಷತ್ರ

ಶುಕ್ರವಾರ

30.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ರೈಲಿಗೆ ಅಡ್ಡ ಬಂದು ಆತ್ಮಹತ್ಯೆ

ಬ್ರಹ್ಮಾವರ : ಹನೆಹಳ್ಳಿ ಗ್ರಾಮದ ಕಂಪ ಪ್ರದೇಶದಲ್ಲಿ ಬಾರ್ಕೂರು–ಉಡುಪಿ ರೈಲ್ವೆ ನಿಲ್ದಾಣಗಳ ಮಧ್ಯೆ ಇರುವ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ 28.01.2026ರ ರಾತ್ರಿ ಸಂಭವಿಸಿದೆ.

ರೈಲ್ವೆ ಹಳಿ ಕಂಬ ಸಂಖ್ಯೆ 676/20 ರಿಂದ 676/22ರ ಕೀ.ಮಿ ಕಂಬದ ನಡುವಿನ ಪ್ರದೇಶದಲ್ಲಿ ಸುಮಾರು 50–55 ವರ್ಷ ಪ್ರಾಯದ ಅಪರಿಚಿತ ಗಂಡಸು, ರಾತ್ರಿ ಸುಮಾರು 01:05 ಗಂಟೆಯ ವೇಳೆ ಚಲಿಸುತ್ತಿದ್ದ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಈ ಕುರಿತು ಬಾರ್ಕೂರು ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಶ್ರೀನಿವಾಸ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 08/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Categories
ಇತರೆ

ಸಾವು

ಸಾವು ಈ ಪದವನ್ನು ಕೇಳಿದ ಕೂಡಲೇ ಮನುಷ್ಯ ಒಂದು ಸಲ ಭಯ ಬೀಳುತ್ತಾನೆ. ಮನುಷ್ಯ ಯಾವುದಕ್ಕೆ ಹೆದರದಿದ್ದರೂ ಸಾವು ಎಂಬ ಪದಕ್ಕೆ ಹೆದರುವುದು ಖಂಡಿತ . ಹಾಗಾದರೆ ಸಾವು ಎಂಬುದು ಬಂದಾಗ ನಾವು ಅದರಿಂದ ಸಂಭ್ರಮಿಸಬಹುದೇ? ಸಾವನ್ನು ಆತ ಸ್ವಾಗತಿಸುತ್ತಾದಿದ್ದಾನೆ ಎಂದರೆ ಆತನಿಗೆ ಜ್ಞಾನೋದಯವಾಗಿ ಆತ್ಮ ಸಾಕ್ಷಾತ್ಕಾರ ಆಗಿ ಆತ ಯೋಗಿಯಾಗಿದ್ದಾನೆ ಎಂದರ್ಥ . ಆತ್ಮ ದೇಹದಲ್ಲಿ ಇರುವವರೆಗೆ ಮಾತ್ರ ದೇಹಕ್ಕೆ ಒಂದು ಬೆಲೆ . ಆತ್ಮ ದೇಹವನ್ನು ಬಿಟ್ಟು ಹೋದ ತಕ್ಷಣ ದೇಹಕ್ಕೆ ಹೆಣ ಎಂದು ಕರೆಯುತ್ತಾರೆ. ಹಾಗಾದ್ರೆ ನಮ್ಮ ದೇಹದ ಮೇಲೆ ನಮಗೆ ಅಷ್ಟೊಂದು ವ್ಯಾಮೋಹವೇ? ಪಂಚಭೂತಗಳಿಂದ ಬಂದಂತ ದೇಹ ಪಂಚಭೂತಗಳಲ್ಲಿ ಸೇರುವುದು ಖಂಡಿತ .
ಭಗವದ್ಗೀತೆಯಲ್ಲಿ ಹೇಳಿದಂತೆ ದೇಹವೆಂಬುದು ಆತ್ಮಕ್ಕೆ ಬಟ್ಟೆ ಇದ್ದಂತೆ . ಆತ್ಮವು ಪುನರ್ಜನ್ಮವೆಂಬ
ಪ್ರಕ್ರಿಯೆ ಬಂದಾಗ ಒಂದು ದೇಹದಿಂದ ಹೊರಬಂದು ತನ್ನ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ .

ಶ್ರೀ ಕೃಷ್ಣನ ಹೇಳಿದಂತೆ ಪರಮಾತ್ಮನಿಗೆ ಮಾತ್ರ ತಾನು ಪಡೆದಂತ ಪ್ರತಿಯೊಂದು ಜನ್ಮದ ನೆನಪಿರುತ್ತದೆ. ಆತ್ಮವು ತನ್ನ ಕರ್ಮಗಳಿಗನುಸಾರವಾಗಿ ಹೊಸ ದೇಹವನ್ನು ಪ್ರವೇಶಿಸಿದಾಗ ತನ್ನ ಮೊದಲ ಜನ್ಮದ ರಹಸ್ಯವನ್ನು ಮರೆಯುತ್ತದೆ . ಆತ್ಮ ಸಾಕ್ಷಾತ್ಕಾರವೆಂದರೆ ಜ್ಞಾನೋದಯ ಎಂದರ್ಥ.ಆತ್ಮಕ್ಕೆ ಜ್ಞಾನೋದಯವಾಗಬೇಕಾದರೆ ನಿರಂತರ ತಪಸ್ಸು ಬೇಕಾಗಿರುತ್ತದೆ . ಆತ್ಮ ದೇಹಕ್ಕೆ ಒಡೆಯ ಪರಮಾತ್ಮ ಸೃಷ್ಟಿಗೆ ಒಡೆಯ. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮದ ಪಯಣವನ್ನು ಪುನರ್ಜನ್ಮ ಎನ್ನುವುದು . ನಾವು ಮಾಡಿದ ಕಾರ್ಯಗಳಿಂದಾಗಿ ನಮ್ಮ ಕರ್ಮವು ಆತ್ಮಕ್ಕೆ ಅಂಟಿಕೊಂಡು ನಮ್ಮ ಪೂರ್ವಜನ್ಮದ ಕರ್ಮಗಳಿಗನುಸಾರ ನಮ್ಮ ಆತ್ಮವು ಹೊಸ ಜನ್ಮವನ್ನು ಪಡೆದುಕೊಳ್ಳುತ್ತದೆ ಎಂದು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ .ಮನುಷ್ಯ ಯಾವುದಕ್ಕೆ ಹೆದರದಿದ್ದರೂ ಸಾವು ಎಂಬ ಪದಕ್ಕೆ ಹೆದರುವುದು ಖಂಡಿತ . ಹಾಗಾದರೆ ಸಾವು ಎಂಬುದು ಬಂದಾಗ ನಾವು ಅದರಿಂದ ಸಂಭ್ರಮಿಸಬಹುದೇ?

ಸಾವನ್ನು ಆತ ಸ್ವಾಗತಿಸುತ್ತಾದಿದ್ದಾನೆ ಎಂದರೆ ಆತನಿಗೆ ಜ್ಞಾನೋದಯವಾಗಿ ಆತ್ಮ ಸಾಕ್ಷಾತ್ಕಾರ ಆಗಿ ಆತ ಯೋಗಿಯಾಗಿದ್ದಾನೆ ಎಂದರ್ಥ . ಆತ್ಮ ದೇಹದಲ್ಲಿ ಇರುವವರೆಗೆ ಮಾತ್ರ ದೇಹಕ್ಕೆ ಒಂದು ಬೆಲೆ . ಆತ್ಮ ದೇಹವನ್ನು ಬಿಟ್ಟು ಹೋದ ತಕ್ಷಣ ದೇಹಕ್ಕೆ ಹೆಣ ಎಂದು ಕರೆಯುತ್ತಾರೆ. ಹಾಗಾದ್ರೆ ನಮ್ಮ ದೇಹದ ಮೇಲೆ ನಮಗೆ ಅಷ್ಟೊಂದು ವ್ಯಾಮೋಹವೇ? ಪಂಚಭೂತಗಳಿಂದ ಬಂದಂತ ದೇಹ ಪಂಚಭೂತಗಳಲ್ಲಿ ಸೇರುವುದು ಖಂಡಿತ .ಭಗವದ್ಗೀತೆಯಲ್ಲಿ ಹೇಳಿದಂತೆ ದೇಹವೆಂಬುದು ಆತ್ಮಕ್ಕೆ ಬಟ್ಟೆ ಇದ್ದಂತೆ . ಆತ್ಮವು ಪುನರ್ಜನ್ಮವೆಂಬ ಪ್ರಕ್ರಿಯೆ ಬಂದಾಗ ಒಂದು ದೇಹದಿಂದ ಹೊರಬಂದು ತನ್ನ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ .

ಶ್ರೀ ಕೃಷ್ಣನ ಹೇಳಿದಂತೆ ಪರಮಾತ್ಮನಿಗೆ ಮಾತ್ರ ತಾನು ಪಡೆದಂತ ಪ್ರತಿಯೊಂದು ಜನ್ಮದ ನೆನಪಿರುತ್ತದೆ. ಆತ್ಮವು ತನ್ನ ಕರ್ಮಗಳಿಗನುಸಾರವಾಗಿ ಹೊಸ ದೇಹವನ್ನು ಪ್ರವೇಶಿಸಿದಾಗ ತನ್ನ ಮೊದಲ ಜನ್ಮದ ರಹಸ್ಯವನ್ನು ಮರೆಯುತ್ತದೆ . ಆತ್ಮ ಸಾಕ್ಷಾತ್ಕಾರವೆಂದರೆ ಜ್ಞಾನೋದಯ ಎಂದರ್ಥ. ಆತ್ಮಕ್ಕೆ ಜ್ಞಾನೋದಯವಾಗಬೇಕಾದರೆ ನಿರಂತರ ತಪಸ್ಸು ಬೇಕಾಗಿರುತ್ತದೆ . ಆತ್ಮ ದೇಹಕ್ಕೆ ಒಡೆಯ ಪರಮಾತ್ಮ ಸೃಷ್ಟಿಗೆ ಒಡೆಯ. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮದ ಪಯಣವನ್ನು ಪುನರ್ಜನ್ಮ ಎನ್ನುವುದು . ನಾವು ಮಾಡಿದ ಕಾರ್ಯಗಳಿಂದಾಗಿ ನಮ್ಮ ಕರ್ಮವು ಆತ್ಮಕ್ಕೆ ಅಂಟಿಕೊಂಡು ನಮ್ಮ ಪೂರ್ವಜನ್ಮದ ಕರ್ಮಗಳಿಗನುಸಾರ ನಮ್ಮ ಆತ್ಮವು ಹೊಸ ಜನ್ಮವನ್ನು ಪಡೆದುಕೊಳ್ಳುತ್ತದೆ ಎಂದು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ .

ಪ್ರದೀಪ್‌ ಕುಮಾರ್‌ ,ಕೋಮುಂಜೆ

Categories
ಶಿಕ್ಷಣ

ಐಎಂಜೆ (IMJ) ವಿದ್ಯಾ ಸಂಸ್ಥೆ : ೭೭ನೇ ಗಣರಾಜ್ಯೋತ್ಸವ ಆಚರಣೆ

ಮೂಡ್ಲಕಟ್ಟೆ : ಐಎಂಜೆ (IMJ) ವಿದ್ಯಾ ಸಂಸ್ಥೆಗಳು ಮೂಡ್ಲಕಟ್ಟೆ ಇಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಗೌರವ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಸುಬೇದಾರ್ ಮೇಜರ್ ಶ್ರೀ ಶಂಕನಾಥ್ ಎಸ್. ನಾಗೇಕರ್ ಅವರು ಉಪಸ್ಥಿತರಿದ್ದು, ರಾಷ್ಟ್ರದ ಏಕತೆ, ಶಿಸ್ತು ಮತ್ತು ದೇಶಭಕ್ತಿಯ ಮಹತ್ವದ ಕುರಿತು ಹಾಗೂ “ಸಂವಹನದ ಭವಿಷ್ಯ ಮತ್ತು ಅಭಿವೃದ್ಧಿ ,ಕ್ಲೌಡ್ ಕಂಪ್ಯೂಟಿಂಗ್,ಉನ್ನತ ಭದ್ರತೆ ಮತ್ತು ನಿರ್ವಿಘ್ನ ಜಾಗತಿಕ ಸಂಪರ್ಕ ಕುರಿತು ಮಾತನಾಡಿದರು. ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಭಾರತೀಯ ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿ, ಅಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದೆ ಎಂದು ತಮ್ಮ ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಅವರ ಸೇವೆ ಹಾಗೂ ಕೊಡುಗೆಗಳನ್ನು ಗುರುತಿಸಿ, ಸಂಸ್ಥೆಯ ವತಿಯಿಂದ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ॥ ಎಸ್. ಎನ್. ಭಟ್ ,ಎಂ ಐ ಟಿ ಕೆ ಪ್ರಾಂಶುಪಾಲ ಡಾ॥ ರಾಮಕೃಷ್ಣ ಹೆಗ್ಡೆ , ಎಂ ಸಿ ಎನ್ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್,ಐ ಎಂ ಜೆ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಪ್ರಾಂಶುಪಾಲರಾದ ಡಾ॥ ಪ್ರತಿಭಾ ಪಟೇಲ್ , ದೈಹಿಕ ಶಿಕ್ಷಣ ನಿರ್ದೇಶಕರು ಡಾ॥ ಆರ್.ನವೀನ್ ಮತ್ತು ಶ್ರೀ ಪ್ರವೀಣ್ ಖಾರ್ವಿ, ಕ್ಯಾಂಪಸ್ ವ್ಯವಸ್ಥಾಪಕರಾದ (ಸೇನೆಯಲ್ಲಿ ಸೇವೆ ಸಲ್ಲಿಸಿರುವ)ಸತ್ಯನಾರಾಯಣ ಮತ್ತು ದೀಪಕ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಎಂಸಿ ಸುಷ್ಮಾ ಉಪಾಧ್ಯಾಯ ಅವರು ನಿರ್ವಹಿಸಿದರು. ಗಣರಾಜ್ಯೋತ್ಸವದ ಆಚರಣೆ ರಾಷ್ಟ್ರಭಕ್ತಿಗೀತೆಗಳೊಂದಿಗೆ ಸಮಾರೋಪಗೊಂಡಿತು.

Categories
ಧಾರ್ಮಿಕ

ಇಂದು ಅಷ್ಟಬಂಧ ಪ್ರತಿಷ್ಠೆಯ ತೃತೀಯ ವರ್ಧಂತ್ಯೋತ್ಸವ

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ತೃತೀಯ ವರ್ಧಂತ್ಯೋತ್ಸವವ ಇಂದು  ಗುರುವಾರ ದೇವಸ್ಥಾನದ ವಠಾರದಲ್ಲಿ ಜರುಗಲಿದೆ.

ಶ್ರೀ ಮೈಲಾರೇಶ್ವರ ಶ್ರೀ ಗಣಪತಿ ಮತ್ತು ಪಾರ್ವತಿ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ತಂತ್ರಿಗಳಾದ ವಿದ್ವಾನ್‌ ಕೋಟ ಶ್ರೀ ಕೆ. ಚಂದ್ರಶೇಖರ್ ಸೋಮಯಾಜಿಯವರ‌ ಸುಪುತ್ರರ ಹಾಗೂ ದೇಗುಲದ ಪ್ರಧಾನ ಅರ್ಚಕರಾದ ಮಂಜುನಾಥ್‌ ಭಟ್‌ ಇವರ ನೇತೃತ್ವದಲ್ಲಿ ಶ್ರೀ ಮೈಲಾರೇಶ್ವರ ದೇವರಿಗೆ ಪಂಚವಿಂಶತಿ ಕಲಶ ಸ್ಥಾಪನೆ ಕಲಾ ಹೋಮ ಅಧಿವಾಸ ಹೋಮ ಶ್ರೀ ಗಣಪತಿ ಹಾಗೂ ದುರ್ಗಾಪರಮೇಶ್ವರಿ ಮತ್ತು ನವಗ್ರಹ ದೇವರಿಗೆ ನವ ಕುಂಭ ಕಲಶ ಸ್ಥಾಪನೆ ಅಧಿವಾಸ ಹೋಮ ಕಲಶಾಭಿಷೇಕ ಪೂರ್ವಕ ಮಹಾಪೂಜೆ ಮತ್ತು ಮಧ್ಯಾಹ್ನ 12:30 ಕ್ಕೆ ಪ್ರಸಾದ ವಿತರಣೆ ನಡೆಯಲಿದ್ದು ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ

ಸಂಜೆ 6.00 ರಿಂದ ರಂಗ ಪೂಜೆ ಸಂಜೆ 7:00 ರಿಂದ ಶ್ರೀ ದೇವರನ್ನು ಪಲ್ಲಕ್ಕಿಯಲ್ಲಿ ಇಟ್ಟು ಉತ್ಸವ ಮೆರವಣಿಗೆ ನಡೆಯಲಿದೆ ಎಂದು ವ್ಯವಸ್ಧಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ.ಕೆ.ಮಧುಕರ ತಿಳಿಸಿದ್ದಾರೆ

 

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಮಾಘ : ಮಾಸ

ಶುಕ್ಲ ಪಕ್ಷ

ಏಕಾದಶಿ : ತಿಥಿ

ರೋಹಿಣಿ : ನಕ್ಷತ್ರ

ಗುರುವಾರ

29.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಆನ್‌ಲೈನ್ ಮೂಲಕ ವಂಚನೆ

ಉಡುಪಿ: ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI), ಮುಂಬೈ ಕೊಲಾಬಾ ಪೊಲೀಸ್ ಠಾಣೆ ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳೆಂದು ನಂಬಿಸಿ ಉಡುಪಿ ನಿವಾಸಿಯೊಬ್ಬರಿಂದ ₹40 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ ಗಂಭೀರ ಸೈಬರ್ ಅಪರಾಧ ಬೆಳಕಿಗೆ ಬಂದಿದೆ.ಕಟಪಾಡಿ ಮೂಡಬೆಟ್ಟು ನಿವಾಸಿ ಕೆ. ರಾಘವೇಂದ್ರ ರಾವ್ (45) ಅವರು ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

11-01-2026 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಿದೇಶಿ ನಂಬರಿನಿಂದ ಕರೆ ಬಂದಿದ್ದು, ಕರೆ ಮಾಡಿದವರು ತಾವು TRAI ಅಧಿಕಾರಿಗಳೆಂದು ಹೇಳಿಕೊಂಡು, ಕೆ. ರಾಘವೇಂದ್ರ ರಾವ್ ಅವರ ಮೊಬೈಲ್ ಸಂಖ್ಯೆಯಿಂದ ಅಕ್ರಮ ಚಟುವಟಿಕೆ ಹಾಗೂ ಬೆದರಿಕೆ ಕರೆಗಳು ನಡೆದಿವೆ ಎಂದು ಭಯ ಹುಟ್ಟಿಸಿದ್ದಾರೆ.
ಅಲ್ಲದೇ ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ, ಕರೆಯನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡವರ ಬಳಿ ವರ್ಗಾಯಿಸಿದ್ದಾರೆ. ನಂತರ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವೀಡಿಯೋ ಕಾಲ್ ಮೂಲಕ ತನಿಖಾಧಿಕಾರಿಯೆಂದು ಪರಿಚಯಿಸಿಕೊಂಡು, ಕೆನರಾ ಬ್ಯಾಂಕ್ ಕೊಲಾಬಾದಲ್ಲಿ ತೆರೆಯಲಾಗಿದ್ದ ಅಕ್ರಮ ಖಾತೆ, ₹4.90 ಕೋಟಿ ಹಣ ವರ್ಗಾವಣೆ, ನರೇಶ್ ಗೋಯಲ್ ಹಣಕಾಸು ದಂಧೆ ಪ್ರಕರಣದ ಸಂಪರ್ಕ ಇತ್ಯಾದಿಗಳನ್ನು ಉಲ್ಲೇಖಿಸಿ ಬಂಧನದ ಬೆದರಿಕೆ ಒಡ್ಡಿದ್ದಾನೆ.ಈ ಮೂಲಕ ಕೆ. ರಾಘವೇಂದ್ರ ರಾವ್ ಅವರಿಂದ ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಗಳಿಂದ “ಫಂಡ್ ಫಂಡ್ ವೆರಿಫಿಕೇಶನ್” ನೆಪದಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ದಿನಾಂಕ 16, 19 ಹಾಗೂ 23 ಜನವರಿ 2026 ರಂದು ಒಟ್ಟು ₹40,00,000 ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಈ ಕುರಿತು ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2026ರಂತೆ ಐಟಿ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4), 308(6) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

Categories
ಬ್ರೇಕಿಂಗ್ ನ್ಯೂಸ್

ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ : ಸವಾರ ಸ್ಧಳದಲ್ಲೇ ಸಾವು

ಭಟ್ಕಳ : ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸವಾರ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನಗರದ ಸಿಟಿ ಲೈಟ್ ಕ್ರಾಸ್ ಬಳಿ ಬುಧವಾರ ಸಂಭವಿಸಿದೆ.ಮೃತರನ್ನು ಶೇರ್ವಾರ್ ನಿವಾಸಿ ತೌಸೀಫ್ (40) ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಭಟ್ಕಳದ ಆಜಾದ್ ನಗರದಲ್ಲಿ ವಾಸಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡ ಯುವಕನನ್ನು ಭಟ್ಕಳ ಮದೀನಾ ಕಾಲೋನಿಯ ನಿವಾಸಿ ಉಮರ್ ರಶಾದ್ (20) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ ಸಿಟಿ ಲೈಟ್ ಕ್ರಾಸ್‌ನಿಂದ ಶಂಸುದ್ದೀನ್ ವೃತ್ತದ ಕಡೆಗೆ ಸಾಗುತ್ತಿದ್ದ ಸ್ಕೂಟರ್‌ಗೆ, ಉಡುಪಿಯಿಂದ ಶಿರಸಿಯತ್ತ ತೆರಳುತ್ತಿದ್ದ ಕಾರು, ಲಾರಿಯನ್ನು ಹಿಂದಿಕ್ಕುವ ವೇಳೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ತೀವ್ರತೆಗೆ ಸ್ಕೂಟರ್ ಹಲವಾರು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸ್ಕೂಟರ್ ಸವಾರರಿಬ್ಬರೂ ರಸ್ತೆ ಮಧ್ಯಕ್ಕೆ ಬಿದ್ದಿದ್ದಾರೆ. ಅಪಘಾತದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಮಂಗಳೂರಿಗೆ ರವಾನಿಸಲಾಯಿತು.

ಆದರೆ ಗಾಯಾಳುಗಳಲ್ಲಿ ಒಬ್ಬರಾದ ತೌಸೀಫ್ ಮಂಗಳೂರಿನ ಆಸ್ಪತ್ರೆಗೆ ತಲುಪುವ ದಾರಿ ಮದ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತದೇಹವನ್ನು ಭಟ್ಕಳಕ್ಕೆ ತರಲಾಗಿದೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Categories
ಕರಾವಳಿ ಸುದ್ದಿ

ಸೇಡಿನ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಮಹಾತ್ಮ ಗಾಂಧಿ ಹೆಸರು ದುರ್ಬಳಕೆ : ಕುತ್ಯಾರು ನವೀನ್ ಶೆಟ್ಟಿ

ದೇಶದ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮ ಗಾಂಧಿ ಅವರ ಮಾತನ್ನೇ ಪಾಲಿಸದ ಕಾಂಗ್ರೆಸಿಗರು ಸ್ವಾತಂತ್ರ್ಯ ದೊರೆತ 79 ವರ್ಷಗಳ ಬಳಿಕವೂ ಕೇವಲ ಸೇಡಿನ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಗಾಗಿ ಮಾತ್ರ ಮಹಾತ್ಮ ಗಾಂಧಿ ಅವರ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ವಿಷಾದನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ಬಡತನ ಮುಕ್ತ ಸ್ವಾವಲಂಬಿ ಗ್ರಾಮ ನಿರ್ಮಾಣದ ಚಿಂತನೆಯೊಂದಿಗೆ ಬಡವರ, ರೈತರ ಮತ್ತು ಮಹಿಳಾ ಸಬಲೀಕರಣದ ಸಹಿತ ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಸುಧಾರಿತ ಆದಾಯ ನೀಡುವ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆಯಲ್ಲಿರುವ ಮಹಾತ್ಮ ಗಾಂಧಿ ಅವರಿಗೆ ಪ್ರಿಯವಾದ ‘ರಾಮ್’ ಹೆಸರನ್ನು ಕಾಂಗ್ರೆಸಿಗರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ಇಂತಹ ಉದಾತ್ತ ಯೋಜನೆಯನ್ನು ಯಾವುದೇ ಮೌಲ್ಯಯುತ ಕಾರಣವಿಲ್ಲದೆ ಕಾಂಗ್ರೆಸ್ ವಿರೋಧಿಸುತ್ತಿದೆ.

ಹಳ್ಳಿಗಳ ಅಭಿವೃದ್ಧಿಗೆ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ವಿಫಲವಾಗಿರುವ ಕಾಂಗ್ರೆಸ್ ಈ ಹಿಂದೆ ‘ರೋಜ್‌ಗಾರ್‌’ ಯೋಜನೆಯನ್ನು ‘ನರೇಗಾ’ ಎಂದು ಪುನರ್ ನಾಮಕರಣ ಮಾಡಿದೆ. ಬಳಿಕ ಅದನ್ನು ‘ಮನ್ರೇಗಾ’ ಎಂದು ಬದಲಾವಣೆ ಮಾಡಿದೆ. ಕಾಂಗ್ರೆಸ್ ಅದೆಷ್ಟು ಯೋಜನೆಗಳಿಗೆ ನೆಹರೂ ಕುಟುಂಬದ ಹೆಸರನ್ನೇ ಇರಿಸಿದೆ ಎಂಬುದು ಜಗಜ್ಜಾಹೀರಾಗಿದೆ.

ಗ್ರಾಮಾಭಿವೃದ್ಧಿಯ ದೂರದರ್ಶಿತ್ವದ ಚಿಂತನೆಯನ್ನು ಹೊಂದಿರುವ ‘ವಿಬಿ-ಜಿ ರಾಮ್‌ ಜಿ’ ಯೋಜನೆಯಡಿ ಗ್ರಾಮ ಪಂಚಾಯತ್‌ಗಳೇ ಅಭಿವೃದ್ಧಿ ಯೋಜನೆಯನ್ನು ರೂಪಿಸುತ್ತವೆ. ತಂತ್ರಜ್ಞಾನವನ್ನು ಬಳಸಿ ಭ್ರಷ್ಟಾಚಾರಕ್ಕೆ ತಡೆ ಹಾಕಲಾಗುತ್ತದೆ. ಈ ಹಿಂದೆ ಇದ್ದ ವಾರ್ಷಿಕ 100 ದಿನಗಳ ಕೆಲಸವನ್ನು ಇದೀಗ 125 ದಿನಗಳಿಗೆ ವಿಸ್ತರಿಸಲಾಗಿದೆ. ದಿನದ ಕೂಲಿಯನ್ನು (ಸಂಬಳ) ರೂ.174 ರಿಂದ ರೂ.370ಕ್ಕೆ ಏರಿಸಲಾಗಿದೆ. ಪ್ರತಿ ವ್ಯಕ್ತಿಗೆ ಈ ಹಿಂದೆ ಇದ್ದ ವಾರ್ಷಿಕ ಗರಿಷ್ಠ ಮಿತಿಯನ್ನು ರೂ.17,400 ರಿoದ ರೂ.46,250ಕ್ಕೆ ಏರಿಸಲಾಗಿದೆ.

ಇಂತಹ ಉದಾತ್ತ ಯೋಜನೆ ಜಾರಿಯಾದರೆ ಬಿಜೆಪಿ ಜನಪ್ರಿಯತೆ ಇನ್ನಷ್ಟು ಹೆಚ್ಚುತ್ತದೆ ಹಾಗೂ ತ್ರಿಸ್ತರ ಸರಕಾರಗಳಲ್ಲಿ ಒಂದಾಗಿರುವ ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ವಿಬಿ-ಜಿ ರಾಮ್‌ ಜಿ’ ಯೋಜನೆಯಿಂದ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂಬುದನ್ನು ಮನಗಂಡಿರುವ ಕಾಂಗ್ರೆಸ್ ನಿರಂತರ ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿರುವುದು ಖಂಡನೀಯ. ಜನ ವಿರೋಧಿ, ಅಭಿವೃದ್ಧಿ ವಿರೋಧಿ ನೀತಿಗಳಿಂದ ದೇಶದೆಲ್ಲೆಡೆ ತಿರಸ್ಕೃತಗೊಂಡಿರುವ ಕಾಂಗ್ರೆಸ್ ಗೆ ಜನತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರದಲ್ಲಿ ಭೀಕರ ವಿಮಾನ ಪತನ: ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಸೇರಿದಂತೆ ಹಲವು ಮಂದಿ ಸಾವು

ಮಹಾರಾಷ್ಟ್ರ: ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಅಪಘಾತ ಸಂಭವಿಸಿದೆ, ಇದು ರಾಜ್ಯ ರಾಜಕಾರಣದಲ್ಲಿಯೇ ಭೀಕರ ಘಟನೆ ಎಂದು ದಾಖಲಾಗಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ ಅವರು ಮುಂಬೈದಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಅವರ ವಿಮಾನ ಭೀಕರವಾಗಿ ಪತನಗೊಂಡಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಲ್ಯಾಂಡಿಂಗ್ ಪ್ರಯತ್ನವಾಗಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಪತನವಾಗಿದೆ. ಪತನದ ಪರಿಣಾಮವಾಗಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಸ್ಥಳದಲ್ಲಿವೆ ಸಾವಿನೋಣಿಗೆ ಕಾರಣವಾದರೆಂದು ವರದಿಗಳು ಸೂಚಿಸುತ್ತಿವೆ.

ಘಟನಾ ಸ್ಥಳಕ್ಕೆ ತಕ್ಷಣ ರಕ್ಷಣೆ ಮತ್ತು ತುರ್ತು ಸೇವಾ ತಂಡಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಘ್ನೇಶ್ವರ ಯಾಂತ್ರಿಕ ಜಘದ ಕಾರಣದ ಬಗ್ಗೆ ತಪಾಸಣೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಜನತೆ, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಈ ದುರ್ಘಟನೆ ಕುರಿತು ಆಗ್ರಹಪೂರ್ವಕವಾಗಿ ಆಘಾತ ವ್ಯಕ್ತಪಡಿಸಿದ್ದಾರೆ