Categories
ಕರಾವಳಿ ಸುದ್ದಿ

ಕೋಳಿ ಫಾರಂ ನಿರ್ಮಾಣ : ಗುಣ ಮುಟ್ಟದ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ವಂಚಿನೆ

ಬ್ರಹ್ಮಾವರ,ಜ.01: ಕೋಳಿ ಫಾರಂ ನಿರ್ಮಾಣಕ್ಕೆ ಬೇಕಾಗುವ ಉತ್ತಮ ಗುಣಮುಟ್ಟದ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ವ್ಯಕ್ತಿ ಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಚೇರ್ಕಾಡಿ ಗ್ರಾಮದ ಹರ್ಷ ಎಂಬವರಿಗೆ ಆರೋಪಿ ರಾಘವೆಂದ್ರ ಎಸ್‌ ರವರು ಪರಿಚಯಸ್ಥರಾಗಿದ್ದು, ಹರ್ಷ ರವರು ಚೇರ್ಕಾಡಿ ಗ್ರಾಮದ, ಕೆನರಾ ಬ್ಯಾಂಕ್‌ ಪೇತ್ರಿ ಶಾಖೆಯಿಂದ ಕೋಳಿ ಫಾರಂ ನಿರ್ಮಾಣದ ಬಗ್ಗೆ ಸಾಲ ಪಡೆದು ಕೋಳಿ ಫಾರಂಗೆ ಬೇಕಾಗುವ ಸಾಮಾಗ್ರಿ ಸಲಕರಣೆಯ ಖರೀದಿಯ ಸಲುವಾಗಿ ಆರೋಪಿಯೊಂದಿಗೆ ಮಾತುಕತೆ ನಡೆಸಿ ಆರೋಪಿಯು ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮುಟ್ಟದ ಉಪಕರಣಗಳನ್ನು 25 ದಿವಸದ ಒಳಗೆ ಸರಬರಾಜು ಮಾಡುವುದಾಗಿ ಕೊಟೇಶನ್‌ ನೀಡಿದ್ದು, ಅದರಂತೆ ಹರ್ಷ ರವರು ಆರೋಪಿಯ ಬ್ಯಾಂಕ್‌ ಖಾತೆಗೆ ತನ್ನ ಬ್ಯಾಂಕ್‌ ಖಾತೆಯಿಂದ ರೂಪಾಯಿ 2,11,300/- ಹಣವನ್ನು ವರ್ಗಾಯಿಸಿದ್ದು ಆದರೆ ಆರೋಪಿಯು ತಾನು ಪಡೆದುಕೊಂಡ ಹಣಕ್ಕೆ ಯಾವುದೇ ಸಾಮಾಗ್ರಿಗಳನ್ನು ಪೂರೈಸದೇ ಹಾಗೂ ಸದ್ರಿ ಹಣವನ್ನು ಮರುಪಾವತಿಸದೇ ಹರ್ಷ ರವರಿಗೆ ಮೋಸ ವಂಚನೆ ಮಾಡಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 272/2025 ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Categories
ಕರಾವಳಿ ಸುದ್ದಿ

ಕೂಲಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ

ಉಡುಪಿ: ಕೂಲಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ನ.23ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ ನಾಪತ್ತೆಯಾದ ಯುವಕ ಉದ್ಯಾವರ ಗ್ರಾಮದ ನಿವಾಸಿ ಲಕ್ಷ್ಮಣ ಛಲವಾದಿ (23) ಎಂದು ತಿಳಿದು ಬಂದಿದೆ.ಇವರು 5 ಅಡಿ 1 ಇಂಚು ಎತ್ತರ, ಕಪ್ಪು ಮೈಬಣ್ಣ ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ಅಥವಾ ಕಾಪು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪೌಷ್ಯ: ಮಾಸ

ಶುಕ್ಲ ಪಕ್ಷ

ಚತುರ್ದಶಿ : ತಿಥಿ

ಮೃಗಶಿರೆ : ನಕ್ಷತ್ರ

ಶುಕ್ರವಾರ

02.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಸಿದ್ದಾಪುರ ಮಧು ಆಯಿಲ್ ಮಿಲ್ ನಲ್ಲಿ ಅಗ್ನಿ ಅನಾಹುತ

ಸಿದ್ದಾಪುರ : ಜನಸಾಲೆ ಬಳಿ ಇರುವ ಮಧು ಆಯಿಲ್ ಮಿಲ್ ನಲ್ಲಿ ಅಗ್ನಿ ಅನಾಹುತ ತಡರಾತ್ರಿ ನೆಡೆದ ಅಗ್ನಿ ಅವಘಡದಲ್ಲಿ ಅಪಾರ ನಷ್ಟ ಉಂಟಾಗಿದೆ.

ತಡರಾತ್ರಿಯಿಂದ ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿಗಳು ಮೂಲಕ ಹಾಗೂ ಸ್ಥಳೀಯರಿಂದ ಬೆಂಕಿ ಶವನ ಕಾರ್ಯಾಚರಣೆ ನಡೆಸಿದ್ದರು.

Categories
ಕರಾವಳಿ ಸುದ್ದಿ

ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ್ ಹೆಗ್ಡೆ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸಂತಾಪ

ಕರಾವಳಿ : ಕರ್ನಾಟಕದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುoಟುಮಾಡಿರುವ ಪ್ರತಿಷ್ಠಿತ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ನಿಟ್ಟೆ ವಿನಯ್ ಹೆಗ್ಡೆ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ದೂರದರ್ಶಿತ್ವದ ಉದಾತ್ತ ಚಿಂತನೆಯೊಂದಿಗೆ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ರಾಜ್ಯಾದ್ಯoತ 44 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜೊತೆಗೆ ದೇರಳಕಟ್ಟೆಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯನ್ನು ಪ್ರಾರಂಭಿಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಕುತ್ಯಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ನಿಷೇಧಿತ ಮಾದಕ ಪದಾರ್ಥ ಮಾರಾಟ :ಆರೋಪಿ ಬಂಧನ

ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ರೈಲ್ವೇ ಹಳಿ ಬಳಿಯ ಕಲ್ಪನೆ ಎಂಬಲ್ಲಿ ನಿಷೇಧಿತ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ನಡೆಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಉತ್ತರ ಪ್ರದೇಶ ಮೂಲದ ಹರ್ದೋಯಿ ಜಿಲ್ಲೆಯ ಜೂರಿ ಚಂದ್ರಾಪುರ್ ನಿವಾಸಿ ರಾಜ್ ಪಾಲ್ ಬಂಧಿತ ಆರೋಪಿ.

ಆರೋಪಿ ರಾಜ್ ಪಾಲ್ ಉತ್ತರ ಪ್ರದೇಶದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ. ಆರೋಪಿಯಿಂದ 21,000 ರೂಪಾಯಿ ಬೆಲೆಬಾಳುವ 425 ಗ್ರಾಂ ಗಾಂಜಾ 650/ ರೂ.ನಗದು, ಒಂದು ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನ ಪೊಲೀಸರು ವಶಪಡಿಸಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Categories
ಕರಾವಳಿ ಸುದ್ದಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಿ ಕೆಲವೊಂದು ಸಮಸ್ಯೆಗಳನ್ನು ಸಂಸದರ ಜೊತೆಗೆ ಅವಲೋಕಿಸಿದ: ಶಾಸಕ ಎ. ಕಿರಣ್ ಕೊಡ್ಗಿ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ 66 ರಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲು ಎನ್ಎಚ್ 66 ರಲ್ಲಿರುವ ಸಮಸ್ಯೆಗಳಲ್ಲಿ ಹೊಸದಾಗಿ ಜಿಪಿಆರ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು.

ಪಡುಬಿದ್ರೆ ಉಡುಪಿಯ ಅಂಬಾಗಿಲು ಬ್ರಹ್ಮಾವರ ಕೋಟ ಜಂಕ್ಷನ್ ತೆಕ್ಕಟ್ಟೆ ಒಟ್ಟು 4-5 ಜಂಕ್ಷನ್ ಗಳಲ್ಲಿ ಮೇಲ್ ಸೇತುವೆ ಮಾಡಬೇಕಾಗಿರುವುದರಿಂದ ಹೊಸದಾಗಿ ಎರಡು ಕಂಪನಿಗಳಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ
ಜಿಪಿಆರ್ ಮಾಡಲು ಅವಕಾಶ ಕಲ್ಪಿಸಿದ್ದು ಅದರ ಜೊತೆಯಲ್ಲಿ ಹೆಜಮಾಡಿ ಯಿಂದ ಕುಂದಾಪುರ ಶಾಸ್ತ್ರಿ ಸರ್ಕಲ್ ತನಕ ಸುಮಾರು 64 ಕಿಲೋಮೀಟರ್ ಸರ್ವಿಸ್ ರಸ್ತೆ ಮಾಡಬೇಕೆನ್ನುವ ಬೇಡಿಕೆ ಹಿನ್ನೆಲೆ ಅನುಗುಣವಾಗಿ ಸುಮಾರು 29 ಕಿಲೋಮೀಟರ್ ಮಂಜೂರಾಗಿ ಪ್ರಸ್ತುತ ಕಾಮಗಾರಿ ಆಗ್ತಾ ಇದೆ ಇನ್ನು 25-30 km ಸರ್ವಿಸ್ ರಸ್ತೆ ಹೊಸದಾಗಿ ಪ್ರಸ್ತಾಪನೆ ಬಂದಿದ್ದು ಅದು ಕೂಡ ಆಗುತ್ತೆ.
ಇದರಲ್ಲಿ ಹೆಜಮಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಅಲ್ಲಿನ ಎರಡು ಕಡೆಯಿಂದ ಸರ್ವಿಸ್ ರಸ್ತೆ ಅಗಲೀಕರಣ ಆಗ್ತಾ ಇರುವುದರಿಂದ ಮತ್ತೆ ಇರುವಂತಹ ರಸ್ತೆ ಕೂಡ ಅಗಲ ಬಂದ ರೀತಿ ಜನರಿಗೆ ಹಾಗೂ ಅನೇಕ ದೇವಸ್ಥಾನಗಳಿಗೆ ತೊಂದರೆ ಆಗುತ್ತೆ ವ್ಯಾಪಾರಗಳಿಗೆ ತೊಂದರೆ ಆಗುತ್ತೆ ಕೆಲವು ಸಮಸ್ಯೆಗಳು ಆಗಿರುವುದು ಸತ್ಯ.
ಅದರ ಮಧ್ಯದಲ್ಲಿಯೂ ಕೂಡ ಹೆಜಮಾಡಿ ದಿಂದ ಕುಂದಾಪುರದವರೆಗೆ ದಿನನಿತ್ಯ ಅನೇಕ ಆಕ್ಸಿಡೆಂಟ್ ಆಗ್ತಾ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಅಪಘಾತಗಳನ್ನು ನಿಯಂತ್ರಣ ತರಲಿಕ್ಕೆ ಮತ್ತು ಕೆಲವು ಕಡೆ ಮೇಲ್ ಸೇತುವೆ ಅಗಲಕ್ಕೆ ಹಾಗೆ ಕೆಲವು ಕಡೆ ಸರ್ಕಲ್ ಮಾಡಲಿಕ್ಕೆ ಇವತ್ತು ಅನುಮತಿ ಪಡೆದುಕೊಂಡು ಈ ಕಾಮಗಾರಿಯನ್ನು ಇಂದು ನಾನು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಜೊತೆ ಸೇರಿಕೊಂಡು ಕಾಮಗಾರಿಯನ್ನು ಪರಿಶೀಲನೆ ಮಾಡಿ ಈ ಮೂಲಕ ಸಾರ್ವಜನಿಕರ ಕೆಲವೊಂದು ಸಮಸ್ಯೆಗಳನ್ನು ಅವಲೋಕಿಸಿ , ಕೆಲವು ಸಣ್ಣಪುಟ್ಟ ಅಡಚಣೆ ಇದ್ದರೂ ಕೂಡ ಸಂಚಾರ ಸುಗಮವಾಗಲಿಕ್ಕೆ ಸಾರ್ವಜನಿಕರ ಸಹಕಾರ ಮಾಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿಕೊಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಗಿಣಿ ದೇವಾಡಿಗ, ಬಿಜಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ  ಸುರೇಶ್ ಶೆಟ್ಟಿ ಗೋಪಾಡಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ
ಆನಂದ ಪೂಜಾರಿ ಹಾಗೂ ಪ್ರಮುಖರಾದ ಸತೀಶ್ ಪೂಜಾರಿ ವಕ್ವಾಡಿ,ಸುಧೀರ್ ಕೆ ಎಸ್, ಕೃಷ್ಣಗೊಲ್ಲ,ಸುರೇಶ್ ಕುಂದರ್,ವಿಟ್ಟಲ್ ಪೂಜಾರಿ ಐರೋಡಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ ಕೆ, ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ ಹಾಗೂಆರ್ಕಿಟೆಕ್ ಇಂಜಿನಿಯರ ಶ್ರೀಮತಿ ಆಶಿಕ, ನಾಸಿರ್,ನ್ಯಾಷನಲ್ ಆರ್ಕಿಟೆಕ್ ಪ್ರಾಜೆಕ್ಟ್ ಇಂಜಿನಿಯರ್ ಚಂದ್ರಶೇಖರ ಸೈಟ್ ಇಂಜಿನಿಯರ್ ಸಂಜಯ್ ಮತ್ತು ನಾಲ್ಕು ಗ್ರಾಮ ಪಂಚಾಯಿತಿನ ಸದಸ್ಯರು, ಸಾರ್ವಜನಿಕರು,, ಪಕ್ಷದ ವಿವಿಧ ಕ್ಷೇತ್ರದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಬೈಂದೂರಿನ ಭವಿಷ್ಯದ ಎಲ್ಲಾ ಕಾರ್ಯಕ್ರಮಗಳಿಗೆ ಸಂಜೀವಿನಿ ಬುನಾದಿಯಾಗಬೇಕು- ಗುರುರಾಜ್ ಶೆಟ್ಟಿ ಗಂಟಿ ಹೊಳೆ

ಉಡುಪಿ : ಜಿಲ್ಲಾ ಪಂಚಾಯತ್ ನ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿ ಹೊಳೆ ಇವರ ಅಧ್ಯಕ್ಷತೆಯಲ್ಲಿ ಸಂಜೀವಿನಿ ಯೋಜನೆಯ ಪ್ರಗತಿ ಸಭೆ ನಡೆಯಿತು. ಗ್ರಾಮೀಣ ಮಹಿಳೆಯರ ಸಾಮಾಜಿಕ ಸಬಲೀಕರಣಕ್ಕಾಗಿ ಸಂಜೀವಿನಿ ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದೆ.ಈಗಾಗಲೇ ಮಹಿಳೆಯರು ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಸಾಲ, ಇಲಾಖೆಗಳ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಚಟುವಟಿಕೆ ನೆಡೆಸುತ್ತಿದ್ದಾರೆ. ಈ ಮಹಿಳೆಯರನ್ನು ಮಾದರಿಯಾಗಿಸಿ ಪ್ರತಿ ಗ್ರಾಮದ ಸಂಜೀವಿನಿ ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮಿಗಳನ್ನಾಗಿಸಲು ಸಿಬ್ಬಂದಿಗಳು ಕ್ರಮ ಕೈಗೊಳ್ಳಬೇಕು. ಕೃಷಿ, ಕೃಷಿಯೇತರ, ಪ್ರವಾಸೋದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರತಿನಿಧಿಸಬೇಕು. ಇಂದು ಗ್ರಾಮೀಣ ಜನರು ನಿರುದ್ಯೋಗದ ಸಮಸ್ಯೆಯಿಂದ ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ನಿರ್ಮಾಣವಾಗುವುದರೊಂದಿಗೆ ಭವಿಷ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರೇ ನಡೆಸಿಕೊಂಡು ಹೋಗುವಷ್ಟು ಸಬಲರಾಗಬೇಕೆಂದು ಹಾಗೂ ಬೈಂದೂರಿನ ಭವಿಷ್ಯದ ಎಲ್ಲಾ ಕಾರ್ಯಕ್ರಮಗಳಿಗೆ ಸಂಜೀವಿನಿ ಬುನಾದಿ ಯಾಗ ಬೇಕು ಎಂದರು.
ಗ್ರಾಮೋತ್ಸವ ಹಾಗೂ ಬೈಂದೂರು ಉತ್ಸವದಲ್ಲಿ ಸಂಭ್ರಮದಿಂದ ಸಂಜೀವಿನಿ ಗುಂಪಿನವರು ಪಾಲ್ಗೊಳ್ಳಿ:

ಈ ಬಾರಿಯ “ಬೈಂದೂರು ಉತ್ಸವ”ದ ಅಂಗವಾಗಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ “ಗ್ರಾಮೋತ್ಸವ” ನಡೆಸಲಾಗುತ್ತಿದ್ದು,ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಇಲ್ಲಿ ದೊರಕುವ ಪ್ರಯೋಜನ ಪಡೆಯಬೇಕು. ಬೈಂದೂರು ಉತ್ಸವದಲ್ಲಿ ಸಂಜೀವಿನಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂರು ಮಾರಾಟ ಮಳಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಂಭ್ರಮದಿಂದ ಭಾಗವಹಿಸುವುದರ ಮೂಲಕ ಮುಂದಿನ “ಗ್ರಾಮೋತ್ಸವ”ಸಂಜೀವಿನಿ ಸಂಘ ಗಳೇ ಮುನ್ನಡೆಸುವಷ್ಟು ಮಹಿಳಾ ಸಂಜೀವಿನಿ ಗುಂಪುಗಳು ಸಶಕ್ತವಾಗಬೇಕು ಎಂದರುಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಭಾಯಲ್,ಉಪ ಕಾರ್ಯದರ್ಶಿ ಶ್ಯಾಮ್ ಎಸ್ ಕದ್ರೊಳ್ಳಿ, ಯೋಜನಾ ನಿರ್ದೇಶಕರಾದ ವಿಜಯ್ ಕುಮಾರ್, ನಿವೃತ್ತ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರದ ಅಲಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಹರೀಶ್,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಂತ್ ಕುಮಾರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ಸೌಮ್ಯ, ಜಿಲ್ಲಾ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ಬೈಂದೂರು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಅಧ್ಯಕ್ಷರು, ಮುಖ್ಯ ಪುಸ್ತಕ ಬರಹಗಾರರು, ಕೃಷಿ ಸಖಿ, ಪಶು ಸಖಿ ಉಪಸ್ಥಿತರಿದ್ದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪೌಷ್ಯ: ಮಾಸ

ಶುಕ್ಲ ಪಕ್ಷ

ತ್ರಯೋದಶಿ : ತಿಥಿ

ರೋಹಿಣಿ: ನಕ್ಷತ್ರ

ಗುರುವಾರ

01.01.2026

ಈ ದಿನ ಎಲ್ಲರಿಗೂ ಶುಭವಾಗಲಿ