Categories
ಇತರೆ

ವಿದ್ಯಾಭ್ಯಾಸ ಶುರುವಾಗುವುದು ಸರಸ್ವತಿ ದೇವಿಯ ಮಡಿಲಿಂದ

ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಶುರುವಾಗುವುದು ಸರಸ್ವತಿ ದೇವಿಯ ಮಡಿಲಿಂದ. ಅ ಎಂಬ ಅಕ್ಷರದಿಂದ ಶುರು ಮಾಡಿದ ಅಕ್ಷರಾಭ್ಯಾಸ ಜೀವನದ ಉದ್ದಕ್ಕೂ ಜ್ಞಾನ ಮತ್ತು ಬುದ್ಧಿಯನ್ನು ಕೊಡುವ ದೇವಿ ಶಾರದಾಂಬೆ. ವಸಂತ ಪಂಚಮಿ ಎಂಬುದು ಶಾರದಾಂಬೆ ದೇವಿಯನ್ನು ಆರಾಧಿಸುವ ಒಂದು ಪವಿತ್ರ ದಿನ .ಹಿಂದೂ ಧರ್ಮದಲ್ಲಿ ವಸಂತ ಪಂಚಮಿ ಹಬ್ಬವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಶುಭ ಸಮಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ, ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು, ಸರಸ್ವತಿ ದೇವಿಯನ್ನು ಪೂಜಿಸುವುದರ ಜೊತೆಗೆ ಶುಭ ಮತ್ತು ಶುಭ ಕಾರ್ಯಗಳನ್ನು ಮಾಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ। ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ॥
ಈ ಮಂತ್ರ ಸರಸ್ವತಿಯನ್ನು ಆರಾಧನೆ ಮಾಡುವ ಮಂತ್ರವಾಗಿದೆ.
ಶಿಕ್ಷಣ ಸಂಸ್ಥೆಗಳು ಮತ್ತು ಕಲಾ ಕೇಂದ್ರಗಳಲ್ಲಿ ವಿಶೇಷ ಪೂಜೆಗಳು ಮತ್ತು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಜ್ಞಾನವು ವ್ಯಕ್ತಿಯನ್ನು ಉನ್ನತೀಕರಿಸುತ್ತದೆ ಮತ್ತು ಸಮಾಜವನ್ನು ಮುನ್ನಡೆಸುತ್ತದೆ ಎಂಬ ಸಂದೇಶವನ್ನು ವಸಂತ ಪಂಚಮಿ ನಮಗೆ ನೆನಪಿಸುತ್ತದೆ. ಭೌತಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಅರಿವು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ಈ ದಿನ ಒತ್ತಿಹೇಳುತ್ತದೆ.
ಹೀಗಾಗಿ, ವಸಂತ ಪಂಚಮಿಯು ಪ್ರಕೃತಿಯ ಜಾಗೃತಿ ಮತ್ತು ಮನುಷ್ಯನ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯನ್ನು ಆಚರಿಸುವ ದಿನವಾಗಿದೆ. ಸರಸ್ವತಿ ದೇವಿಯ ಆಶೀರ್ವಾದದಿಂದ ಜ್ಞಾನ ಮತ್ತು ಬುದ್ಧಿವಂತಿಕೆಯು ತಮ್ಮ ಜೀವನವನ್ನು ತುಂಬಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ಪ್ರತಿ ವರ್ಷ ಈ ಪವಿತ್ರ ದಿನವನ್ನು ಆಚರಿಸುತ್ತಾರೆ. ದೇವತೆಗಳು ಮತ್ತು ದಾನವರು ಸಮುದ್ರ ಮಥನ ಮಾಡಿದಾಗ
ಸರಸ್ವತಿಯ ಜನನ ವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ . ಸರಸ್ವತಿ ಎಂಬ ಹೆಸರು ಕೇಳಿದ ಕೂಡಲೇ ನಮಗೆ ನೆನಪಾಗುವುದು ಶೃಂಗೇರಿ , ಶಾರದಾಂಬೆ ನೆಲೆಸಿದ ಆ ಪವಿತ್ರ ತಾಣ. ಅಕ್ಷರಭ್ಯಾಸಕ್ಕಾಗಿ ಆಕೆಯ ಮಡಿಲಿಗೆ ಬರುವ ಮಕ್ಕಳು ಸಾವಿರಾರು. ಶಾರದಾಂಬೆಯ ಅನುಗ್ರಹ ಎಲ್ಲರಿಗೂ ಸಿಗುವುದಿಲ್ಲ . ಆಕೆ ಆಶೀರ್ವಾದ ಅನುಗ್ರಹ ಸಿಕ್ಕಿದ ಜನರೇ ಧನ್ಯರು.

ಪ್ರದೀಪ್‌ ಕುಮಾರ್‌ ಕೋಮುಂಜೆ

Categories
ಕರಾವಳಿ ಸುದ್ದಿ

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ: ಕುಂದಾಪುರ ಸಹೋದರಿಯರ ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಓಕವುಡ್ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿಯ ಸಹೋದರಿ ವಿದ್ಯಾರ್ಥಿಗಳಾದ
ಪ್ರಗ್ಯಾ ದೇವಾಡಿಗ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ದ್ವಿತಾ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ.ಇವರು ಶಿಕ್ಷಕಿ ಅಂಬಿಕಾ ಕುಂದಾಪುರ ಮತ್ತು ಕೊಂಕಣ ರೈಲ್ವೆ ಟಿ.ಟಿ ಮೋಹನ ದೇವಾಡಿಗ ಬಿಜೂರು ಇವರ ಪುತ್ರಿಯರು.ಇವರಿಗೆ ಕುಂದಾಪುರ ಅಬಾಕಸ್ ಸೆಂಟರ್ ನ ಪ್ರಸನ್ನ ಕೆ.ಬಿ, ಮಹಾಲಕ್ಷ್ಮಿ ಹಾಗೂ ದೀಪಾರವರು ತರಬೇತಿ ನೀಡಿದ್ದರು .

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಮಾಘ : ಮಾಸ

ಶುಕ್ಲ ಪಕ್ಷ

ದಶಮಿ : ತಿಥಿ

ಕೃತ್ತಕೆ : ನಕ್ಷತ್ರ

ಬುಧವಾರ

28.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ‌ ಸಾವು

ಉಡುಪಿ: ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ‌ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದೆ. ಗಂಭೀರ ಸ್ಥಿತಿಯಲ್ಲಿದ್ದ ಮೈಸೂರಿನ 26 ವರ್ಷದ ದಿಶಾ ಎಂಬವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಶಂಕರಪ್ಪ (22) ಮತ್ತು ಸಿಂಧು (23) ಅವರು ಸೋಮವಾರ ಮೃತಪಟ್ಟಿದ್ದರು.ರೆಸಾರ್ಟ್ ರೊಂದರಲ್ಲಿ ಉಳಿದಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇವರ ಪೈಕಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸಮುದ್ರ ಮಧ್ಯೆ ದೋಣಿ ಅಕಸ್ಮಿಕವಾಗಿ ಮುಳುಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದಿದ್ದರು.

ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ. ಇಂದು ದಿಶಾ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ

Categories
ಬ್ರೇಕಿಂಗ್ ನ್ಯೂಸ್

ಪ್ರವಾಸಿಗರ ದುರಂತ ಸಾವಿನಲ್ಲೂ ಚಿಲ್ಲರೆ ರಾಜಕಾರಣ ಮಾಡಲು ಹೊರಟ ಪ್ರಸಾದ ಕಾಂಚನ್ ಹೇಳಿಕೆ ಅವಿವೇಕದ ಪರಮಾವಧಿ : ದಿನೇಶ್ ಅಮೀನ್ ಆಕ್ರೋಶ

ನಿನ್ನೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಡಿ ಬೆಂಗ್ರೆಯಲ್ಲಿ ಪ್ರವಾಸಿ ಬೋಟ್ ದುರಂತದಲ್ಲಿ ಮೂವರು ಪ್ರವಾಸಿಗರು ಸಾವಿಗೀಡಾದ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್ಪಾಲ್ ಸುವರ್ಣ ಹೇಳಿಕೆಯನ್ನು ಸಹಿಸದೇ ಹತಾಶ ಪ್ರಸಾದ್ ಕಾಂಚನ್ ಇಂದು ಶಾಸಕರ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಮೂಲಕ ಸಾವಿಗೀಡಾದ ಪ್ರವಾಸಿಗರ ಸಾವಿನ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿ ಅವಮಾನ ಮಾಡುವ ಮೂಲಕ ತಮ್ಮ ಅವಿವೇಕದ ಪರಮಾವಧಿಯನ್ನು ಮೆರೆದಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಹೇಳಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಸಾದ್ ಕಾಂಚನ್ ರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಿವೇ ಇಲ್ಲದೆ ಇರುವುದು ವಿಪರ್ಯಾಸ. ಕೋಡಿ ಬೆಂಗ್ರೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಭಾಗ ಎಂಬ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದ ಪ್ರಸಾದ್ ಕಾಂಚನ್ ಪ್ರಬುದ್ಧ ಮತದಾರರನ್ನು ಹೊಂದಿರುವ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇ ಉಡುಪಿ ಜನತೆಗೆ ಮಾಡಿದ ಅಪಮಾನವಾಗಿದೆ.

ಉಡುಪಿ ಶಾಸಕರು ಓರ್ವ ಜವಾಬ್ದಾರಿಯುತ ಶಾಸಕರಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿರುವ ಘಟನೆಯನ್ನು ಖಂಡಿಸಿ, ಅಮಾಯಕ ಪ್ರವಾಸಿಗರ ಸಾವಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಹೇಳಿಕೆ ನೀಡಿದಾಗ, ಪ್ರಸಾದ್ ಕಾಂಚನ್ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಮಾತನಾಡದೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಕ್ತಾರನಂತೆ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಾಗೂ ನಿರ್ಲಕ್ಷ್ಯ ಧೋರಣೆಗೆ ಪರೋಕ್ಷವಾಗಿ ಸಹಕಾರ ನೀಡುವಂತಿದೆ.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿಗರ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲದ ಪ್ರಸಾದ್ ಕಾಂಚನ್ ಒಮ್ಮೆಲೇ ಜ್ಞಾನೋದಯವಾದಂತೆ ಅವಿವೇಕದ ಹೇಳಿಕೆ ನೀಡಿ ಪ್ರವಾಸಿಗರ ದುರಂತ ಸಾವಿನಲ್ಲೂ ಚಿಲ್ಲರೆ ರಾಜಕಾರಣ ಮಾಡಲು ಹೊರಟಿರುವುದು ವಿಷಾದನೀಯ.

ಮೂರು ಅಮೂಲ್ಯ ಜೀವಗಳನ್ನು ಈ ದುರಂತದಿಂದ ಕಳೆದುಕೊಂಡರೂ ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಕ್ರಮಕ್ಕೆ ಆಗ್ರಹ ಮಾಡದೇ, ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮರೆಮಾಚಲು ಪ್ರಸಾದ್ ಕಾಂಚನ್ ಮುಂದಾಗಿರುವುದು ಅತ್ಯಂತ ಖಂಡನೀಯ.

ಪ್ರವಾಸೋದ್ಯಮ ಸಹಿತ ಎಲ್ಲಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪ್ರವಾಸಿ ಬೋಟುಗಳ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಕಾರ್ಯಾಚರಿಸುವ ಬಗ್ಗೆ ಯಾವುದೇ ಕ್ರಮ ವಹಿಸದ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುವ ಬದಲು ಅದೇ ಅಧಿಕಾರಿಗಳ ಪರ ರಕ್ಷಣೆಗೆ ನಿಂತು ಹೇಳಿಕೆ ನೀಡಿರುವುದನ್ನು ಕಂಡರೆ ಪ್ರಸಾದ್ ಕಾಂಚನ್ ಕೂಡಾ ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳೊಂದಿಗೆ ಶಾಮೀಲಾದಂತೆ ಕಾಣುತ್ತಿದೆ.

ಮುಂದಿನ ದಿನಗಳಲ್ಲಿಯಾದರೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಸಾದ್ ಕಾಂಚನ್ ರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಉತ್ತಮ. ಪದೇ ಪದೇ ಇಂತಹ ಕ್ಷುಲ್ಲಕ, ಅಪ್ರಬುದ್ಧ, ಅಸಂಬದ್ಧ ಹೇಳಿಕೆಗಳು ಜಿಲ್ಲೆಯಲ್ಲಿ ಕೇವಲ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗುವುದು ನಿಶ್ಚಿತ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ಧ: ಖಾಸಗಿ ಸ್ಥಳದಲ್ಲಿದ್ದ ಗಿಡಗಂಟಿಗಳಿಗೆ ಬೆಂಕಿ

ಉಡುಪಿ : ನಗರದ ಬೈಲಕೆರೆ ಗೋವಿಂದ ಪುಷ್ಕರಣಿ ರಸ್ತೆ ಬಳಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ಧರೊಬ್ಬರು ಖಾಸಗಿ ಸ್ಥಳದಲ್ಲಿದ್ದ ಗಿಡಗಂಟಿಗಳಿಗೆ ಬೆಂಕಿ ಹಚ್ಚಿರುವ ಘಟನೆಯು ನಡೆದಿದೆ.ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ, ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ.

ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ವೃದ್ಧರನ್ನು ಪೋಲಿಸರ ಸಹಕಾರದಿಂದ ದೊಡ್ಡಣಗುಡ್ಡೆಯ ಡಾ|ಎ ವಿ ಬಾಳಿಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದರು. ಮುಖ್ಯಆರಕ್ಷಕ ಹರೀಶ್ ಮಾಳ ಅವರು ವೃದ್ಧರ ವಿಳಾಸ ಪತ್ತೆಗೊಳಿಸಿ ಸಂಬಂಧದಿಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು. ಮಾಜಿ ನಗರಸಭಾ ಸದಸ್ಯ ಗಿರೀಶ್ ಅಂಚನ್ ಸಹಕರಿಸಿದರು.

Categories
ಕರಾವಳಿ ಸುದ್ದಿ

ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಯೋಧನಿಗೆ ಅವಮಾನ: ಕ್ಷಮೆಯಾಚಿಸಿದ ಟೋಲ್‌ ಸಿಬ್ಬಂದಿ

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಭಾನುವಾರ ರಾತ್ರಿ ಬ್ರಹ್ಮಾವರ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಅವಮಾನಪಡಿಸಿದ ಘಟನೆ ನಡೆದಿತ್ತು.

ಇದೀಗ ತಮ್ಮ ತಪ್ಪಿನಿಂದ ಎಚ್ಚೆತ್ತುಕೊಂಡ ಟೋಲ್‌ ಸಿಬ್ಬಂದಿ ನಿವೃತ್ತ ಯೋಧನ ಕ್ಷಮೆಯಾಚಿಸಿದ್ದಾರೆ.

ಸಾಸ್ತಾನ ಟೋಲ್‌ ಪ್ಲಾಜಾದ ಸಿಬ್ಬಂದಿಗಳಾದ ಶೀನ ಹಾಗೂ ಸುರೇಶ್ ವಿಡಿಯೋ ಮೂಲಕ‌ ಕ್ಷಮಾಪಣೆ ಕೇಳಿದ್ದಾರೆ. ನಿವೃತ್ತ ಸೈನಿಕ ಶ್ಯಾಮರಾಜ್ ಅವರು ಟೋಲ್‌ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ.ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.

Categories
ಬ್ರೇಕಿಂಗ್ ನ್ಯೂಸ್

ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಇಂಪನಾ ಆರ್. ಪ್ರಥಮ ಸ್ಥಾನ

ಕುಂದಾಪುರ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 21ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ ಸ್ಪರ್ಧೆ- 2026 ಜನವರಿ 25 ರಂದು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಸುಮಾರು 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಕುಂದಾಪುರದ ಇಂಪನಾ .ಆರ್ ಅವರು Z-X ಲೆವೆಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಇವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ ಕೇಂದ್ರದ ಮುಖ್ಯಸ್ಥ ಪ್ರಸನ್ನ ಕೆ. ಬಿ ಅವರಿಂದ ತರಬೇತಿ ಪಡೆದಿರುತ್ತಾರೆ. ಶಿಕ್ಷಕರಾದ ಮಹಾಲಕ್ಷ್ಮೀ ಮತ್ತು ದೀಪ ಅವರು ಮಾರ್ಗದರ್ಶನ ನೀಡಿರುತ್ತಾರೆ.
ಅವರು ಕುಂದಾಪುರ ನಿವಾಸಿಯಾಗಿದ್ದು, ದೀಪಿಕಾ ಜಿ. ಮತ್ತು ರಾಘವೇಂದ್ರ ಶೇರೆಗಾರ್ ಅವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಅವರು ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Categories
ಕರಾವಳಿ ಸುದ್ದಿ

ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ : ಪ್ರತಿಷ್ಠಾ ವರ್ಧಂತ್ಯುತ್ಸವ

ಉಡುಪಿ : ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಪ್ರತಿಷ್ಠಾ ವರ್ಧoತ್ಯುತ್ಸವ, ಅನ್ನ ಸಂತರ್ಪಣೆ ಹಾಗೂ 66ನೇ ಭಜನಾ ಮಂಗಲೋತ್ಸವವು ಜ.25ರಂದು ಭಜನಾ ಮಂದಿರದಲ್ಲಿ ನಡೆಯಿತು. ಪ್ರತಿಷ್ಠಾ ವರ್ಧಂತ್ಯುತ್ಸವವು ದಯಾಕರ ಶಾಂತಿ ಬನ್ನಂಜೆ ಅವರ ಪೌರೋಹಿತ್ಯದಲ್ಲಿ ನಡೆಯಿತು. 66ನೇ ಭಜನಾ ಮಂಗಲೋತ್ಸವಕ್ಕೆ ಸಂಘದ ಅಧ್ಯಕ್ಷ ಶಿವದಾಸ್ ಪಿ. ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಪಾಧ್ಯಕ್ಷ ಎ.ಮುದ್ದಣ್ಣ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ವಿನಯ್ ಕುಮಾರ್, ಗೌರವ ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ಭಜನಾ ಸಹ ಸಂಚಾಲಕ ಶಂಕರ ಪೂಜಾರಿ, ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಚಾಲಕಿ ಗೋಧಾವರಿ ಎಮ್. ಸುವರ್ಣ, ಸಂಘದ ಆಡಳಿತ ಸಮಿತಿ ಸದಸ್ಯರಾದ ಸುಧಾಕರ್ ಎ., ರಮೇಶ್ ಕೋಟ್ಯಾನ್, ಕುಶಲ್ ಕುಮಾರ್ ಎ., ಲಕ್ಷ್ಮಣ ಪೂಜಾರಿ, ಗುರುರಾಜ್ ಪೂಜಾರಿ, ಸತೀಶ್ ಪೂಜಾರಿ, ಭಾಸ್ಕರ್ ಕೋಟ್ಯಾನ್, ನಿತಿನ್ ಕುಮಾರ್, ಭಾಸ್ಕರ ಅಂಚನ್, ಜನಾರ್ಧನ ಪೂಜಾರಿ, ಮಹಿಳಾ ಘಟಕದ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್, ವಿಜಯ ಕೃಷ್ಣ, ಕಾರ್ಯದರ್ಶಿ ವಾಣಿಶ್ರೀ ಅರುಣ್, ಸಂಘಟನಾ ಕಾರ್ಯದರ್ಶಿ ಪ್ರಭಾ ದಯಾನಂದ್, ಸಮಿತಿ ಸದಸ್ಯರಾದ ವಾಣಿ ಪ್ರಭಾಕರ್, ಜಯಂತಿ ಹರೀಶ್, ಪ್ರಮೀಳಾ ಭಾಸ್ಕರ್, ಜಯಂತಿ ನಾರಾಯಣ, ಅರ್ಚಕರಾದ ಅವಿನಾಶ್ ಪೂಜಾರಿ, ಜೀವನ್, ಅದಿತ್, ಆಯುಷ್, ಪ್ರಮುಖರಾದ ಸಂಜೀವ ಪೂಜಾರಿ, ಸುರೇಶ್ ಎ., ಮೀನಾಕ್ಷಿ ಗೋಪಾಲ್ ಪೂಜಾರಿ, ರವಿ ಪಾಲನ್, ಜೀವನ್, ಕುಶಲ ತುಕಾರಾಮ್, ಅರುಣ್ ಕುಮಾರ್ ಸಹಿತ ಸಂಘದ ಮತ್ತು ಮಹಿಳಾ ಘಟಕದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಮಧ್ಯಾಹ್ನ ಗಂಟೆ 12.00ರಿಂದ ರಾತ್ರಿ ಗಂಟೆ 12.00ರ ವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಮಾಘ : ಮಾಸ

ಶುಕ್ಲ ಪಕ್ಷ

ನವಮಿ : ತಿಥಿ

ಭರಣಿ : ನಕ್ಷತ್ರ

ಮಂಗಳವಾರ

27.01.2026

ಈ ದಿನ ಎಲ್ಲರಿಗೂ ಶುಭವಾಗಲಿ