Categories
ರಾಷ್ಟ್ರೀಯ ಸುದ್ದಿ

ನಮ್ಮ ಬ್ರಹ್ಮೋಸ್‌ ಪಾಕ್‌ ನಿದ್ದೆ ಕೆಡಿಸಿದೆ : ಮೋದಿ

ಕಾನ್ಸುರ : ಪಾಕಿಸ್ತಾನ ಪೋಷಿತ ಉಗ್ರವಾದವನ್ನು ಸರ್ಪಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವುಗಳು ಮತ್ತೆ ತಲೆ ಎತ್ತಿದರೆ, ಹುತ್ತದಿಂದ ಹೊರಗೆ ಎಳೆದು ಹೊಡೆದು ಹಾಕುತ್ತೇವೆ’ ಎಂದು ಕಠೋರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನಮ್ಮ ಬ್ರಹ್ಮಸ್ ಕ್ಷಿಪಣಿ ಪಾಕ್ ಸೇನೆಯ ನಿದ್ದೆ ಕೆಡಿಸಿದೆ’ ಎಂದೂ ಹೇಳಿದ್ದಾರೆ.

‘ಮೇ 9ರಂದು ಬೆಳಗ್ಗಿನ ನಮಾಜ್ ಬಳಿಕ ಭಾರತದ ಮೇಲೆ ದಾಳಿಗೆ ಸಜ್ಜಾಗಿದ್ದ ನಮ್ಮ ಮೇಲೆ ಬ್ರಹ್ಮಸ್ ದಾಳಿ ಮಾಡಿ ನಮ್ಮ ನಿದ್ದೆ ಗೆಡಿಸಿತು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ಬೆನ್ನಲ್ಲೇ ಮೋದಿ ಈ ನುಡಿಗಳನ್ನಾಡಿದ್ದಾರೆ.

ಬಿಹಾರದ ಕಾರಾಕಾಟ್ ಹಾಗೂ ಉತ್ತರ ಪ್ರದೇಶದ ಕಾನ್ಸುರದಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಮೋದಿ ಅವರು, ‘ಆಪರೇಷನ್ ಸಿಂದೂರ ಮುಗಿದಿಲ್ಲ, ಸ್ಥಗಿತವೂ ಆಗಿಲ್ಲ. ಅದು ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತವಷ್ಟೇ’ ಎಂದರು.

ಭರವಸೆ ಈಡೇರಿಸಿದೆ :

ಬಿಹಾರದ ಕಾರಾಕಟ್‌ನಲ್ಲಿ ಮಾತನಾಡಿದ ಅವರು, ಏ.22ರ ಪಹಲ್ಗಾಮ್ ನರಮೇಧದ ಮರುದಿನ ತಾವು ಬಿಹಾರದ ಮಧುಬನಿಯಲ್ಲಿ ಮಾಡಿದ ಭಾಷಣವನ್ನು ನೆನಪಿಸಿಕೊಂಡರು. ‘ಅಪರಾಧಿಗಳಿಗೆ ಕನಸಿನಲ್ಲಿಯೂ ಊಹಿಸಲಾಗದ‌ ಶಿಕ್ಷೆಯಾಗುತ್ತದೆ ಎಂದು ನಾನು ಭರವಸೆನೀಡಿದ್ದೆ. ಆ ಪ್ರತಿಜ್ಞೆಯನ್ನುಪೂರೈಸಿ ಇಂದು ನಾನು ನಿಮ್ಮೆದುರು ನಿಂತಿದ್ದೇನೆ.

ಭಾರತೀಯ ಮಹಿಳೆಯರು ಧರಿಸುವ ಸಿಂದೂರದ ತಾಕತ್ತನ್ನು ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವವೇ ನೋಡಿದೆ’ ಎಂದರು. ಪಾಕ್ ಸೇನೆಯ ರಕ್ಷಣೆಯಲ್ಲಿ ಉಗ್ರರು ಸುರಕ್ಷಿತರಾಗಿದ್ದರು. ಆದರೆ ಭಾರತ ಅವರನು ಮಂಡಿಯೂರುವಂತೆ ಮಾಡಿದೆ ಎಂದರು. 

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಜ್ಯೇಷ್ಠ : ಮಾಸ

ಶುಕ್ಲ ಪಕ್ಷ

ಪುಷ್ಯ : ನಕ್ಷತ್ರ

ಪಂಚಮಿ: ತಿಥಿ

ಶನಿವಾರ

31.05.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಅಪರಾಧ

ಬಾವಿಗೆ ಬಿದ್ದು ಕಾರ್ಮಿಕ ಸಾವು

ಕುಂದಾಪುರ : ಬಾವಿ ತೋಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೋಟೇಶ್ವರ ಬಳಿಯ ಗೋಪಾಡಿ ಗ್ರಾಮದ ಮೂಡುಗೋಪಾಡಿ ಎಂಬಲ್ಲಿ ನಡೆದಿದೆ. ಬಳ್ಳೂರು ಗ್ರಾಮದ ಸುಭಾಶ್ (50) ಮೃತಪಟ್ಟವರು.

ಸುಭಾಶ್ ಅವರು ಮಗನಾದ ಸುರೇಂದ್ರ ಅವರ ಜೊತೆ ಬಾವಿ ಕೆಲಸಕ್ಕೆ ಹೋಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಗೋಪಾಡಿ ಗ್ರಾಮದ ಮೂಡುಗೋಪಾಡಿ ಕರುಣಾಕರ ಎಂಬುವರ ಜಾಗದಲ್ಲಿ ಬಾವಿ ತೋಡುವ ಕೆಲಸ ಮಾಡುತ್ತಿದ್ದರು. ಬಾವಿಯ ರಿಂಗ್ ಬಡಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ ಪಿವಿಸಿ ಪೈಪ್ ಬಾವಿಗೆ ಬಿದ್ದಿದ್ದನ್ನು ತೆಗೆಯಲು ಬಾವಿಗೆ ಇಳಿದಿದ್ದ ಸುಭಾಶ್ ಅವರು ಬಾವಿಯಿಂದ ಮೇಲೆ ಬರಲು ಹಗ್ಗದ ಸಹಾಯದಿಂದ ಹತ್ತುತ್ತಿರುವಾಗ ಆಕಸ್ಮಿಕವಾಗಿ ಹಗ್ಗವು ಕೈಯಿಂದ ಜಾರಿ ಬಾವಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಪರಾಧ

ವಿಷ ಪದಾರ್ಥ ಸೇವಿಸಿದ್ದ ವ್ಯಕ್ತಿ ಸಾವು

ಕುಂದಾಪುರ : ವಿಷ ಪದಾರ್ಥ ಸೇವಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಪುಟ್ಟಯ್ಯ (68) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುಟ್ಟಯ್ಯ ಅವರಿಗೆ 2019ರಲ್ಲಿ ನರದೌರ್ಬಲ್ಯದ ಕಾಯಿಲೆ ಉಂಟಾಗಿ ಮಣಿಪಾಲ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ನಂತರ ಕೊರೋನಾ ಸಂದರ್ಭ ಕ್ವಾರಂಟೈನ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯರ ಚಿಕಿತ್ಸೆಯಿಂದ ಸರಿಯಾಗಿ ಗುಣಮುಖವಾಗದೆ ಮಾನಸಿಕ ಖಿನ್ನತೆಯಲ್ಲಿ ಬಳಲುತ್ತಿದ್ದ ಅವರು ಮೇ 19ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಉಡುಪಿ ಎಸ್‌ ಪಿ ವರ್ಗಾವಣೆ

ಕುಂದಾಪುರ :  ಉಡುಪಿ ಜಿಲ್ಲಿಯ ಪೊಲೀಸ್‌ ವರಿಷ್ಠಾಧಿಕಾರಿಯಾದ ಡಾ. ಅರುಣ್‌ ರವರನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್‌ ಪಿ ಯಾಗಿ ನೇಮಕ ಮಾಡಲಾಗಿದೆ ಉಡುಪಿ ಜಿಲ್ಲಾ ಎಸ್‌ ಪಿ ಯಾಗಿ ಹರಿರಾಂ ಶಂಕರ್‌ ರವರನ್ನು ನಿಯುಕ್ತಿಗೊಳಿಸಲಾಗಿದೆ

ಉಡುಪಿ ಜಿಲ್ಲಿಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ. ಅರುಣ್‌ ರವರು ಕಳೆದೆರಡು ವರ್ಷಗಳಿಂದ ಅಪರಾಧಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದು ಮಟ್ಕ ಇಸ್ಪೀಟ್‌ ದಂಧೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ನಿರ್ಭಂಧ ಹೇರಿದ್ದು ಪೊಲೀಸರ ಕರ್ತವ್ಯ ಲೋಪ ಕಂಡು ಬಂದ ಹಿನ್ನಲೆಯಲ್ಲಿ ನಿರ್ದಾಕ್ಷಿಣ್ಯವಾಗಿ ಅನೇಕ ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ದರು ಇದೀಗ ಅವರನ್ನು ದ.ಕ ಜಿಲ್ಲಾ ಎಸ್‌ ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

Categories
ಬ್ರೇಕಿಂಗ್ ನ್ಯೂಸ್

ಇಂದು ಶಾಲೆಗಳಿಗೆ ರಜೆ

ಕುಂದಾಪುರ : ಕಳೆದ ಹಲವಾರು ದಿನಗಳಿಂದ ಅವ್ಯಾವಹತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ
ಜಿಲ್ಲೆಯಾದ್ಯಾಂತ ಇಂದು ದಿನಾಂಕ 30.05.2025 ರಂದು ಅಂಗನವಾಡಿ ಹಾಗೂ 1ನೇ ತರಗತಿಯಿಂದ 10ನೇ
ತರಗತಿಯವರೆಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿಗಳಾದ ವಿದ್ಯಾಕುಮಾರಿಯವರು ಆದೇಶ
ಹೊರಡಿಸಿದ್ದಾರೆ
Categories
ರಾಷ್ಟ್ರೀಯ ಸುದ್ದಿ

ಉಗ್ರರನ್ನು ಹಿಂದಿರುಗಿಸಿದರೆ ಮಾತ್ರ ಮಾತುಕತೆ : ಭಾರತ

ಹೊಸದಿಲ್ಲಿ : ಪಾಕಿಸ್ತಾನ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರನ್ನು ಹಸ್ತಾಂತರಿಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತಕ್ಕೆ ಬಿಟ್ಟು ಕೊಟ್ಟ ನಂತರವೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯಲಿದೆ. ಎಂದು ಭಾರತ ತಿಳಿಸಿದೆ.

ಈ ಮೂಲಕ ಪಾಕಿಸ್ತಾನದೊಂದಿಗೆ ಭವಿಷ್ಯದ ಯಾವುದೇ ಮಾತುಕತೆಗೆ ಭಾರತ ದೃಢವಾದ ಷರತ್ತುಗಳನ್ನು ವಿಧಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇತ್ತೀಚೆಗೆ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆಗೆ ಸಿದ್ದ ಎಂದು ಹೇಳಿದ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.

ವಿಶೇಷವಾಗಿ 26 ನಾಗರಿಕರನ್ನು ಕೊಂದ ಪಹಲ್ದಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂದೂರ್ ನಂತರ, ಎರಡೂ ನೆರೆಹೊರೆಯವರ ನಡುವಿನ ಸಂಬಂಧಗಳು ಉದ್ವಿಗ್ನವಾಗಿವೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದ ಬಗ್ಗೆ ಭಾರತದ ನಿಲುವು ಯಾವಾಗಲೂ ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಹೇಳಿದರು.

Categories
ರಾಷ್ಟ್ರೀಯ ಸುದ್ದಿ

ರಾಜಸ್ಥಾನದ ಮಾಜಿ ಕೈ ಸಚಿವನ ಆಪ್ತ ಬಂಧನ

ಜೈಸಲ್ವೇರ್ : ಗಡಿಯಾಚೆಗಿನ ಉಗ್ರರ ಸಂಹಾರದ ಬಳಿಕ ಭಾರತದ ಗಡಿಯೊಳಗಿನ ದೇಶದ್ರೋಹಿಗಳ ಬೇಟೆ ಮುಂದುವರಿದಿದೆ. ರಾಜಸ್ಥಾನದ ಜೈಸರ್‌ನಲ್ಲಿ ಕಾಂಗ್ರೆಸ್‌ ಮಾಜಿ ಸಚಿವರೊಬ್ಬರ ಆಪ್ತನಾಗಿದ್ದ ರಾಜ್ಯ ಸರ್ಕಾರಿ ನೌಕರನನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಬಂಧಿಸಲಾಗಿದೆ. ಬಂಧಿತನನ್ನು ಶಾಕುರ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲಾ ಉದ್ಯೋಗ ಕಚೇರಿಯಲ್ಲಿ ಕೆಲಸ ಮಾಡುತಿದ್ದಾನೆ

ಈತನ ಮೊಬೈಲ್‌ನಲ್ಲಿ ಪಾಕ್‌ಗೆ ಸಂಬಂಧಿಸಿದ ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದು, ಪ್ರಮುಖ ಮಾಹಿತಿಗಳನ್ನು ವೈರಿ ದೇಶಕ್ಕೆ ರವಾನಿಸಿರುವ ಶಂಕೆಯಿದೆ. ಜತೆಗೆ ಕೆಲ ದಿನಗಳ ಹಿಂದೆ ಖಾನ್ 2-3 ಬಾರಿ ಪಾಕಿಸ್ತಾನಕ್ಕೆ ಹೋಗಿಬಂದಿದ್ದ ಎನ್ನಲಾಗಿದೆ.ಬಂಧಿತ ಖಾನ್, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಸಾಲೆಹ್ ಮೊಹಮ್ಮದ್ ಮತ್ತು ದಿ.ಗಾಜಿ ಫಕೀ‌ರ್ ಮತ್ತು ಅವರ ಪರಿವಾರದ ಆಪ್ತ ಎನ್ನಲಾಗಿದೆ.

Categories
ರಾಷ್ಟ್ರೀಯ ಸುದ್ದಿ

ಲಾಹೋರ್ ರ್ಯಾಲಿಯಲ್ಲಿ ಪಹಲ್ಗಾಮ್ ಸೂತ್ರಧಾರಿ

ಹೊಸದಿಲ್ಲಿ : ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಸೂತ್ರಧಾರಿ, ಲಷ್ಕರ್-ಎ-ತೊಯ್ದಾ ಕಮಾಂಡರ್ ಸೈಫುಲ್ಲಾ ಕಸೂರಿ, ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ ಪುತ್ರ ತತ್ವಾ ಸಯೀದ್ ಜತೆ, ಲಾಹೋರ್ ನಲ್ಲಿ ನಡೆದ ಭಾರತ ವಿರೋಧಿ ರ್ಯಾಲಿಯಲ್ಲಿ ರಾಜಾರೋಷ ಅಡ್ಡಾಡುತ್ತಿದ್ದನೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪಾತಕಿ ಕಸೂರಿ ಭಾರತ ವಿರೋಧಿ ಮತ್ತು ಜಿಹಾದಿ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯವುಳ್ಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ಯೋಧರ ಗುಂಡೇಟಿಗೆ ಹೆಣವಾದ ಭಯೋತ್ಪಾದಕರೆಲ್ಲರೂ ಹುತಾತ್ಮರೆಂದು ಪಾತಕಿ ಕಸೂರಿ ರ್ಯಾಲಿಯಲ್ಲಿ ಗುಣಗಾನ ಮಾಡುತ್ತಿದ್ದ ದೃಶ್ಯ ಕೂಡ ವಿಡಿಯೋದಲ್ಲಿದೆ. ಪಹಲ್ಲಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರ ತಾನೆಂದು ಆರೋಪಿಸಲಾಗಿದೆ. ಇದೀಗ ತನ್ನ ಹೆಸರು ಇಡೀ ಜಗತ್ತಿಗೇ ಗೊತ್ತಾಗಿದೆ ಎಂಬ ಕಸೂರಿ ಹೇಳಿಕೆ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (ಪಿಎಂಎಂಎಲ್) ರ್ಯಾಲಿ ಆಯೋಜಿಸಿತ್ತು

Categories
ರಾಷ್ಟ್ರೀಯ ಸುದ್ದಿ

ಅಪರೇಶನ್‌ ಸಿಂದೂರ ಇನ್ನೂ ಮುಗಿದಿಲ್ಲ

ಕೋಲ್ಕತಾ : ಆಪರೇಷನ್ ಸಿಂದೂರ ಮುಗಿದಿಲ್ಲ, ಉಗ್ರ ಪೋಷಕರ ವಿರುದ್ಧ ನಮ್ಮ ದೇಶ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ನಾವು ಪಾಕಿಸ್ತಾನದೊಳಗೆ ನುಗ್ಗಿ 3 ಬಾರಿ ದಾಳಿ ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಪರೇಷನ್ ಸಿಂದೂರ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಅಲಿಪುರ್‌ದ್ವಾರ್‌ನಲ್ಲಿ ಗುರುವಾರ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಮಹಿಳೆಯರ ಘನತೆಗೆ ಅವಮಾನ ಮಾಡಿದ ಉಗ್ರರ ದಾರ್ಷ್ಟ್ಯಕ್ಕೆ ನಮ್ಮ ಸೇನಾಪಡೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದರು.

ಬಂಗಾಳದ ಈ ಭೂಮಿಯಲ್ಲಿ ನಿಂತು ನಾನು 140 ಕೋಟಿ ಭಾರತೀಯರ ಪರ ಘೋಷಿಸುತ್ತಿದ್ದೇನೆ. ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಏ.22ರಂದು ಪಹಲ್ಲಾಂ ದಾಳಿ ಮೂಲಕ ಉಗ್ರರು ತೋರಿದ ಬರ್ಬರತೆ ಕುರಿತು ಪಶ್ಚಿಮ ಬಂಗಾಳದಲ್ಲೂ ತೀವ್ರ ಆಕ್ರೋಶ ಮನೆ ಮಾಡಿದೆ. ನಿಮ್ಮೊಳಗಿನ ಸಿಟ್ಟು ನಾನು ಅರ್ಥಮಾಡಿಕೊಳ್ಳಬಲ್ಲೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂದೂರ ಅಳಿಸುವ ದಾರ್ಷ್ಟ್ಯ ಮೆರೆದರು. ನಮ್ಮ ಯೋಧರು ಅವರಿಗೆ ಸಿಂದೂರದ ಶಕ್ತಿ ಏನೆಂದು ತೋರಿಸಿದರು ಎಂದರು.

ಪಹಲ್ಲಾಂ ದಾಳಿ ಬಳಿಕ ಇನ್ನು ಮುಂದೆ ನಮ್ಮ ನೆಲದಲ್ಲಿ ಯಾವುದೇ ಉಗ್ರ ದಾಳಿ ನಡೆದರೆ ಅದಕ್ಕೆ ಭಯೋತ್ಪಾದಕರು ಸೂಕ್ತ ಬೆಲೆ ತೆರಬೇಕಾದೀತು ಎಂಬ ಸಂದೇಶವನ್ನು ಇಡೀ ವಿಶ್ವ ಸಮುದಾಯಕ್ಕೆ ಭಾರತ ರವಾನಿಸಿದೆ. ನಾವು ಅವರ ಮನೆಗೆ ಮೂರು ಬಾರಿ (ಸರ್ಜಿಕಲ್ ಸ್ಟೈಕ್, ಬಾಲಾಕೋಟ್ ದಾಳಿ ಮತ್ತು ಆಪರೇಷನ್ ಸಿಂದೂರ) ಪ್ರವೇಶಿಸಿ ದಾಳಿ ಮಾಡಿದ್ದೇವೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.