Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಜ್ಯೇಷ್ಠ : ಮಾಸ

ಶುಕ್ಲ ಪಕ್ಷ

ಪುನರ್ವಸು: ನಕ್ಷತ್ರ

ಚೌತಿ : ತಿಥಿ

ಶುಕ್ರವಾರ

30.05.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಅಪರಾಧ

ಟಾಟಾ ಏಸ್‌ ವಾಹನ ಪಲ್ಟಿ : ಸಂಚಾರಕ್ಕೆ ತಡೆ

ಬೈಂದೂರು : ಬೈಂದೂರು ರಾಷ್ಟ್ರೀಯ ಹೆದ್ದಾರಿ ಒತ್ತಿನೆಣೆಯ ತಿರುವಿನಲ್ಲಿ ಟಾಟಾ ಏಸ್‌ ವಾಹನವೊಂದು ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ

ಟಾಟಾ ಏಸ್‌ ವಾಹನವು ಭಟ್ಕಳದಿಂದ ಕುಂದಾಪುರಕ್ಕೆ ಸಾಗುವ ವೇಳೆ ಬೈಂದೂರಿನ ಒತ್ತಿನೆಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಚಾಲಕ ಹಾಗೂ ಸಹ ಸವಾರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ

ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಐ ಆರ್‌ ಬಿ ಕಂಪೆನಿಯ ಕ್ರೇನ್ ಸಹಾಯದಿಂದ ವಾಹನವನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ 

ಬೈಂದೂರು ಪೊಲೀಸ್‌  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಕರಾವಳಿ ಸುದ್ದಿ

ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೀನಿವಾಸ ಪೂಜಾರಿ

ಕುಂದಾಪುರ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು  ನವದೆಹಲಿಯ ರೈಲ್ವೆ ಭವನದಲ್ಲಿ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವರವರನ್ನು ಭೇಟಿ ಮಾಡಿ ಹಾಸನ-ಬೆಂಗಳೂರು ರೈಲ್ವೆ ವಿದ್ಯುದೀಕರಣವನ್ನು ಬೇಗನೆ ಮುಗಿಸುವಂತೆ ಮತ್ತು ಅದೇ ಸಂದರ್ಭದಲ್ಲಿ ಕರಾವಳಿ ರೈಲಿನ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ವಿನಂತಿಸಿದರು.

ಕೊಂಕಣ ರೈಲ್ವೇ ವಿಲೀನದ ಕುರಿತು ಮಹಾರಾಷ್ಟ್ರ ಸರಕಾರ ತನ್ನ ಒಪ್ಪಿಗೆ ತಿಳಿಸಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆದು ವಿಲೀನದ ಕುರಿತು ಮುಂದಿನ ಕಾರ್ಯಗಳನ್ನು ಆರಂಭಿಸುವಂತೆ ಸಚಿವರನ್ನು ವಿನಂತಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಬೆಂಗಳೂರು ಹಾಗೂ ತಿರುಪತಿ ಎರಡೂ ಕಡೆ ತಲುಪಿಸುವ ರೈಲು ಸೇವೆ ಆರಂಭಿಸುವಂತೆ ಕೋರಿದ್ದು ಚಿಕ್ಕಮಗಳೂರು- ಬೆಂಗಳೂರು-ತಿರುಪತಿ ರೈಲಿಗಾಗಿ ರೈಲು ಮಂಡಳಿಯಲ್ಲಿ ಸಭೆ ನಡೆಸುವಂತೆ ವಿನಂತಿಸಿದರು.

ಸಂಸದ ಕೋಟ ಅವರ ಈ ಎಲ್ಲಾ ಮನವಿಗಳಿಗೆ ರೈಲ್ವೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು,ರೈಲು ಮಂಡಳಿಯಲ್ಲಿ ಸದ್ಯದಲ್ಲಿಯೇ ಸಭೆ ಕರೆದು ಈ ಎಲ್ಲಾ ವಿಷಯಗಳ ಕುರಿತು ಕ್ರಮಕೈಗೊಳ್ಳುವ ಕುರಿತು ಭರವಸೆ ನೀಡಿದರು

Categories
ಶಿಕ್ಷಣ

ತ್ರಿಶಾ ಕ್ಲಾಸಸ್ : ಸಿಎ ಫೌಂಡೇಶನ್ ತರಗತಿ ಆರಂಭ

ತ್ರಿಶಾ ಕ್ಲಾಸಸ್: ಸಿಎ ಫೌಂಡೇಶನ್ ತರಗತಿ ಆರಂಭ

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೂ ಒತ್ತು ನೀಡುತ್ತಾ ಬಂದಿರುವ ಸಂಸ್ಥೆ ತ್ರಿಶಾ ಸಂಸ್ಥೆ. ಈ ವಿದ್ಯಾ ಸಂಸ್ಥೆಯು ವೃತ್ತಿಪರ ಶಿಕ್ಷಣದೊಂದಿಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು ಸುಮಾರು 80,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು ನಡೆಸುತ್ತಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಈ ಬಾರಿ ಜೂನ್ 1 ರಂದು ಸಿಎ ಫೌಂಡೇಶನ್ ತರಗತಿಗಳು ಆರಂಭವಾಗುತ್ತಿದೆ.

ತರಗತಿಯ ವಿಶೇಷತೆಗಳು

  • ನುರಿತ ಪ್ರಾಧ್ಯಾಪಕ ವೃಂದ
  • ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್ ಗಳೊಂದಿಗೆ ರಿವಿಷನ್ ಪುಸ್ತಕ ಲಭ್ಯ
  • ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು ಹೇಳಿಕೊಡಲಾಗುತ್ತದೆ
  • ಮಾಕ್ ಟೆಸ್ಟ್ ಸರಣಿ ಹಾಗೂ ಎಲ್ಲಾ ವಿಷಯಗಳ ಕುರಿತು ರಿವಿಶನ್ ತರಗತಿಗಳು.
  • ಉತ್ತಮ ಫಲಿತಾಂಶ
  • ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ

ಪ್ರಸ್ತುತ ಸಾಲಿನ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ, ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಅಥವಾ ಮಂಗಳೂರಿನ ಕೊಟ್ಟಾರದ ವಿದ್ಯಾರ್ಥಿ ಗ್ರಾಮದಲ್ಲಿರುವ ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Categories
ಕರಾವಳಿ ಸುದ್ದಿ

ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ : 46ರ ಸರಣಿ ಸಂಭ್ರಮ

ಕೋಟ : ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 46 ರ ಸಂಭ್ರಮ,

ಆ ಪ್ರಯುಕ್ತ ಸಾಧಕ ಕೃಷಿಕರ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಮೇ.30ರ ಶುಕ್ರವಾರ ಸಂಜೆ 4.30 ನಡೆಯಲಿದ್ದು ಕೃಷಿ ಕ್ಷೇತ್ರದ ಸಾಧಕ ಬ್ರಹ್ಮಾವರ ತಾಲೂಕಿನ ಐರೋಡಿ ಗೋಳಿಬೆಟ್ಟು ಪರಿಸರದ ಯುವ ಕೃಷಿಕರಾದ ರಘುರಾಮ ಮಡಿವಾಳ ಇವರನ್ನು ಗೌರವಿಸುವ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಅಧ್ಯಕ್ಷ ಮನೋಹರ್ ಪೂಜಾರಿ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ

ಕೋಟ : ನಬಾರ್ಡ್ನ ಡಿಜಿಎಮ್ ಮಾಲಿನಿ ಸುವರ್ಣ ಮತ್ತು ನಬಾರ್ಡ್ ಅಧಿಕಾರಿ ಎಸ್. ಪಿ. ಮಹಾಪಾತ್ರ ಇವರ ನೇತೃತ್ವದ ತಂಡ ಓಡಿಸ್ಸಾ ರಾಜ್ಯದ ವಿವಿಧ ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಸುಮಾರು 20ಸಹಕಾರಿ ಮುಖಂಡರುಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಇವರು ಸಂಘವು ನಡೆದು ಬಂದ ದಾರಿ, ಸದಸ್ಯತ್ವ, ಸದಸ್ಯರಿಗೆ ಸಂಘದಿAದ ದೊರಕುವ ವಿವಿಧ ಸಾಲಗಳು, ಸ್ವ ಸಹಾಯ ಸಂಘ ರಚನೆ, ಉಳಿತಾಯ ಕ್ರೋಢೀಕರಣ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಸಂಘದ ವ್ಯವಹಾರ ಅಭಿವೃದ್ಧಿ, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಸಂಘದ ಆರ್ಥಿಕ ಅಭಿವೃದ್ಧಿ, ಸಾಲ ನೀಡುವಿಕೆ ಮತ್ತು ವಸೂಲಾತಿ, ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು. ಸಂಘದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆ ಮತ್ತು ಮಣೂರು ಶಾಖೆಯ ನೂತನ ಶಾಖಾ ಕಟ್ಟಡ, ಗೋದಾಮು, ವಾಣಿಜ್ಯ ಮತ್ತು ವಸತಿ ಸಂಕೀರ್ಣಕ್ಕೆ ಅವರು ಭೇಟಿ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು

Categories
ಅಪರಾಧ

ಅಕ್ರಮ ಗೋ-ಸಾಗಾಟ : ಮೂವರ ಬಂಧನ

ಕುಂದಾಪುರ : ಸಿದ್ದಾಪುರದ ಐರಬೈಲು ಎಂಬಲ್ಲಿ  ಅಕ್ರಮ ಗೋವುಗಳ ಸಾಗಾಟ ಪತ್ತೆ ಹಚ್ಚಿದ ಶಂಕರನಾರಾಯಣ ಪೊಲೀಸರು ವಾಹನ ಸಹಿತ ಗೋವುಗಳನ್ನು  ಸ್ವಾಧೀನ ಪಡಿಸಿಕೊಂಡಿದ್ದಾರೆ.

ಶಂಕರ ನಾರಾಯಣ ಠಾಣಾಧಿಕಾರಿ ನಾಸೀರ್‌ ಹುಸೇನ್‌ ಹಾಗೂ ಸಿಬ್ಬಂದಿಗಳು ನಡೆಸಿದ ಕಾರ್ಯಾಅಚರಣೆಯಲ್ಲಿ
ಮಹಾರಾಷ್ಟ್ರದಲ್ಲಿ ಗೋವು ಕಳವು ಮಾಡಿ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ 3 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಆರೋಪಿ ಗಳಾದ ಮುಸ್ತಾಕ್ ಹುಸೇನ್ ಸಾಬ್ ನದಾಫ್, ಇರ್ಫಾನ್ ಇಬ್ರಾಹಿಂ ಸಾಬ್ ಜಮಾದಾರ್, ಮಹಮ್ಮದ್ ಆದಿಲ್ ಭಟ್ಕಳ ಎಂಬವರನ್ನು ಬಂಧಿಸಲಾಗಿದ್ದು 3 ಲಕ್ಷ ರೂ. ಮೌಲ್ಯದ ವಾಹನ, 45 ಸಾವಿರ ಮೌಲ್ಯದ ಗೋವುಗಳು, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ ಸುದ್ದಿ

ಟಿಸಿಎಸ್ ಗೆ ಆಯ್ಕೆಗೊಂಡ ಐ.ಎಂ.ಜೆ ಪದವಿ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿಗಳು.

ಮೂಡ್ಲಕಟ್ಟೆ : ಮೂಡ್ಲಕಟ್ಟೆ ಪದವಿ ಕಾಲೇಜಿನ ಅಂತಿಮ ಬಿಸಿಎ ಪದವಿಯಲ್ಲಿ ಓದುತ್ತಿರುವ ಕಾಲೇಜಿನ ಪ್ರಥಮ ಬ್ಯಾಚನ 8 ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಐ.ಟಿ ಕಂಪನಿಯಾದ ಟಿ.ಸಿ.ಎಸ್ ಗೆ ಆಯ್ಕೆಗೊಂಡಿರುತ್ತಾರೆ.

ಎರಡು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿಯರಾದ ನೇತ್ರಾವತಿ ದೇವಾಡಿಗ, ತಸ್ಮಿ ಹೆಗ್ಡೆ, ಕೀರ್ತನ, ಪ್ರತಿಭಾ, ಹಾಗು ನಿರೋಷ ಮತ್ತು ವಿದ್ಯಾರ್ಥಿಗಳಾದ ಶ್ರೀವತ್ಸ ಕಾಮತ್, ರಾಘವೇಂದ್ರ ಕುಮಾರ್ ಭಟ್, ಹಾಗು ಶ್ರೀಧರ್ ಭಟ್ ಆಯ್ಕೆಯಾಗಿರುತ್ತಾರೆ

ಸಂಸ್ಥೆಯು ಪದವಿಯಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ಆಯ್ಕೆಗಾಗಿ ವಿಶೇಷವಾದ ತರಬೇತಿಯನ್ನು ನೀಡುತ್ತಿದ್ದು, ಪದವಿಯ ಮೊದಲ ಸೆಮಿಸ್ಟರ್ ನಿಂದಲೇ ತರಬೇತಿಯನ್ನು ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ, ಭಾಷಾ ಪರಿಣಿತಿ, ಅಣುಕು ಸಂದರ್ಶನ ಹೀಗೆ ಹಲವು ವಿಷಯಗಳಲ್ಲಿ ನುರಿತ ತಜ್ಞರಿಂದ ತರಬೇತಿಯನ್ನು ನೀಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಸಂದರ್ಶನವನ್ನು ಎದುರಿಸಲು ಸಹಾಯವಾಗುತ್ತಿದೆ.

ಈಗಾಗಲೇ ಹಲವು ಕಂಪನಿಗಳಿಗೆ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ ಮತ್ತು ಕಾಲೇಜಿನ ಪ್ರಾಶುಪಾಲೆ ಡಾI ಪ್ರತಿಭಾ ಎಂ. ಪಟೇಲ್, ಇದು ವಿದ್ಯಾರ್ಥಿಗಳ ಹಾಗು ಸಂಸ್ಥೆಯ ಅವಿರತ ಪ್ರಯತ್ನಕ್ಕೆ ಸಂದ ಫಲ ಎಂದು ಶ್ಲಾಗಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಉಪ ಪ್ರಾಂಶುಪಾಲರು ಮತ್ತು ಪ್ಲೇಸ್ಮೆಂಟ್ ಆಫೀಸರ್ ಪ್ರೊ.ಜಯಶೀಲ್ ಕುಮಾರ್ ಮತ್ತು ಅಸಿಸ್ಟೆಂಟ್ ಪ್ಲೇಸ್ಮೆಂಟ್ ಆಫೀಸರ್ ಪ್ರೊ.ರಾಜೇಶ್ವರಿ ಶೆಟ್ಟಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಸ್ಥೆಯಲ್ಲಿನ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹೆಮ್ಮೆಯಿಂದ ಶುಭ ಹಾರೈಸಿದ್ದಾರೆ.

Categories
ಕರಾವಳಿ ಸುದ್ದಿ

ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ : ಸುನಿಲ್‌ಕುಮಾ‌ರ್

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೋಡುಕಟ್ಟೆ-ಬೋರ್ಕಟ್ಟೆ-ರಂಜಾಳ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ರು. 5 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್‌ತಿಳಿಸಿದ್ದಾರೆ.

ಕಾರ್ಕಳದ ಜೋಡುಕಟ್ಟೆಯಿಂದ ಬೋರ್ಕಟ್ಟೆ-ರೆಂಜಾಳ-ಇರ್ವತ್ತೂರು-ಸಾಣೂರು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಅತ್ಯಂತ ತಿರುವುಗಳಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶಾಸಕ ವಿ. ಸುನಿಲ್ ಕುಮಾ‌ರ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಶೀಘ್ರ ಕಾಮಗಾರಿ ಪ್ರಾರಂಭಿಸಿಲಾಗುವುದು ಎಂದು ಕಾರ್ಕಳ ಶಾಸಕರ ವಿಕಾಸ ಜನಸೇವಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಅಪರಾಧ

ರಹಿಮಾನ್‌ ಕೊಲೆ : 15 ಮಂದಿಯ ವಿರುದ್ದ ಪ್ರಕರಣ

ಬಂಟ್ವಾಳ : ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ (32) ಅವರ ಬರ್ಬರ ಹತ್ಯೆ, ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಮಧ್ಯೆ ಹತ್ಯೆಯಾದ ರಹೀಂ ಪಾರ್ಥಿವ ಶರೀರದ ದಫನ ಕಾರ್ಯವು ಬುಧವಾರ ಮಧ್ಯಾಹ್ನದ ವೇಳೆಗೆ ಕೊಳತ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಮಂಗಳವಾರ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ತುಂಬಿಕೊಂಡು ಕುರಿಯಾಳ ಗ್ರಾಮದ ಇರಾಕೋಡಿಯ ರಾಜೀವಿ ಎಂಬವರ ಮನೆಯ ಬಳಿ ಖಾಲಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದೀಪಕ್, ಸುಮಿತ್ ಸಹಿತ ಒಟ್ಟು 15 ಮಂದಿ ಏಕಾಏಕಿ ಸ್ಥಳಕ್ಕಾಗಮಿಸಿ, ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.