Categories
ಕರಾವಳಿ ಸುದ್ದಿ

ಕಾಣೆಯಾದ ಅಪ್ರಾಪ್ತ ಬಾಲಕ ಪತ್ತೆ

ಗಂಗೊಳ್ಳಿ : ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಬೇಣ್ಗೇರಿ ನಾಗ ದೇವಸ್ಥಾನದ ಬಳಿ ವಾಸ ಮಾಡಿಕೊಂಡಿರುವ ದಿ.ಹರೀಶ್‌ ಹಾಗೂ ದಿ.ಶ್ವೇತಾ ಪೂಜಾರಿ ದಂಪತಿಯವರ 2 ನೇ ಮಗನಾದ ಸುಮಾರು 10 ವರ್ಷ ಪ್ರಾಯದ ಸಮೃದ್ಧ ಎಂಬ ಅಪ್ರಾಪ್ತ ಬಾಲಕನು ಆತನ ಮಾವನಾದ ವಸಂತ ಪೂಜಾರಿ ಎಂಬವರ ಜೊತೆಯಲ್ಲಿ ವಾಸಮಾಡಿಕೊಂಡಿರುತ್ತಾನೆ. ಈತನು ಗುಜ್ಜಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 07/01/2026 ರಂದು ಎಂದಿನಂತೆ ಬಾಲಕನು ಶಾಲೆಗೆ ಹೋಗಿ ಮನೆಗೆ ಬಂದು ಸಂಜೆ 6:00 ಗಂಟೆಯಿಂದ ಗುಜ್ಜಾಡಿ ಗ್ರಾಮದ ಬೇಣ್ಗೇರಿ ನಾಗ ದೇವಸ್ಥಾನದ ಬಳಿ ಇತರ ಮಕ್ಕಳೊಂದಿಗೆ ಆಟವಾಡಲು ಹೋಗಿದ್ದವನು ರಾತ್ರಿ 07:00 ಗಂಟೆಯಾದರೂ ಮನೆಗೆ ವಾಪಾಸ್ಸು ಬಾರದೇ ಕಾಣೆಯಾದ ಬಗ್ಗೆ ಆತನ ಮಾವನಾದ ವಸಂತ ಪೂಜಾರಿ ಎಂಬುವವರು ಠಾಣೆಗೆ ಬಂದು ಮಾಹಿತಿ ನೀಡಿದಂತೆ ಕೂಡಲೇ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್‌ ನಾಯಕ್ ರವರು ಹೆಚ್‌ ಡಿ ಕುಲಕರ್ಣಿ, ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶಿವಕುಮಾರ್‌ ಬಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರುರವರ ನಿರ್ದೇಶನದಂತೆ ಪವನ್‌ ನಾಯಕ್ (ಕಾ & ಸು), ಸುದರ್ಶನ್‌ ಬಿ ಎನ್ (ತನಿಖೆ) ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ರಾಘವೇಂದ್ರ ಶೆಟ್ಟಿ, ಚಂದ್ರ ಪಿ, ರಾಘವೇಂದ್ರ ಪೂಜಾರಿ, ಸಂದೀಪ್‌ ಕುರಾಣಿ, ರಿತೇಶ್‌ ಶೆಟ್ಟಿ, ಮಾಳಿಂಗರಾಯ, ನಿತೀನ್‌, ಶರಣಪ್ಪ, ಮಲ್ಲಪ್ಪ, ಮಾರುತಿ ನಾಯ್ಕ, ರವಿಚಂದ್ರರವರು ಕೂಡಲೇ ಸ್ಥಳಕ್ಕೆ ಹೋಗಿ ಸದ್ರಿ ಪರಿಸರದಲ್ಲಿ ಕಾಣೆಯಾದ ಬಾಲಕನ ಪತ್ತೆಯ ಬಗ್ಗೆ ಸಾರ್ವಜನಿಕರೊಂದಿಗೆ ನಿರಂತರವಾದ ಹುಡುಕಾಟ ನಡೆಸಿ, ಬಾಲಕನ ಮನೆಯಿಂದ ಸುಮಾರು 250 ಮೀಟರ್‌ ದೂರದಲ್ಲಿರುವ ಬಂಡೆ ಕಲ್ಲಿನ ಕೆಳಗಡೆ ಪೊಟರೆಯಲ್ಲಿ ಮಲಗಿಕೊಂಡಿದ್ದ ಬಾಲಕನನ್ನು ಪತ್ತೆ ಹಚ್ಚಿ ಆತನ ಪೋಷಕರಿಗೆ ಒಪ್ಪಿಸಿರುತ್ತಾರೆ

Categories
ಬ್ರೇಕಿಂಗ್ ನ್ಯೂಸ್

ಲಂಚ ಸ್ವೀಕರಿಸಿದ ಆರೋಪ : ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್ ಬಂಧನ

ಉಡುಪಿ : ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಿಡುಗಡೆಯಾದ ಸಬ್ಸಿಡಿ ಹಣಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಉಡುಪಿ ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್ ಶಿವಕುಮಾರ್ ಎಂಬಾತನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಮೀನು ವ್ಯಾಪಾರಿ ರಮೇಶ್ ತಿಂಗಳಾಯ ಎಂಬವರು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಸಣ್ಣ ಟೆಂಪೋ ರಿಕ್ಷಾ ಖರೀದಿ ಮಾಡಿದ್ದು, ಈ ಬಗ್ಗೆ 1.20ಲಕ್ಷ ರೂ. ಸಬ್ಸಿಡಿ ಹಣ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಕಮಿಷನ್ ರೂಪದಲ್ಲಿ 10ಸಾವಿರ ರೂ. ನೀಡುವಂತೆ ಬನ್ನಂಜೆಯಲ್ಲಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಸೂಪರ್‌ವೈಸರ್ ಶಿವಕುಮಾರ್ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.

ಲೋಕಾಯುಕ್ತ ಮಂಗಳೂರು ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಾಜೇಂದ್ರ ನಾಯ್ಕ್ ಎಂ.ಎನ್. ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.ಅದರಂತೆ ರಮೇಶ್ ತಿಂಗಳಾಯ, 10ಸಾವಿರ ರೂ. ಲಂಚದ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಲಂಚ ನೀಡಲು ಇಷ್ಟ ಇಲ್ಲದ ಕಾರಣ ಅವರು, ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಷಷ್ಠಿ : ತಿಥಿ

ಪೂರ್ವೆ : ನಕ್ಷತ್ರ

ಗುರುವಾರ

08.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ : ಬಿಜೆಪಿ ವತಿಯಿಂದ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಕುಂದಾಪುರ: ಕುಂದಾಪುರ ಬಿಜೆಪಿ ಮತ್ತು ಶಾಸಕರು ಹಾಗೂ ಆಪ್ತ ಸಹಾಯಕರ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಪ್ ಗ್ರೂಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುತ್ತಿರುವ ಸಚಿನ್ ಬಸ್ರೂರು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕುಂದಾಪುರ ನಗರ ಠಾಣೆಗೆ ದೂರು‌ ನೀಡಲಾಯಿತು.

ಭಾರತೀಯ ಜನತಾಪಾರ್ಟಿ ಕುಂದಾಪುರ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಹಾಗೂ ಬಿಜೆಪಿಯ ಪ್ರಮುಖರೊಂದಿಗೆ ಆಧಾರ ರಹಿತವಾಗಿ ವಾಟ್ಸಾಪ್ ಗ್ರೂಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗಲು ಸಂಚನ್ನು ರೂಪಿಸುತ್ತಿರುವ ಸಚಿನ್ ಬಸ್ರೂರು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕುಂದಾಪುರ ನಗರ ಠಾಣೆಗೆ ಭೇಟಿ ನೀಡಿ ಕುಂದಾಪುರ ವೃತ್ತ ನಿರೀಕ್ಷಕರಾದ ಜಯರಾಂ ಗೌಡ ಇವರ ಮೂಲಕ ಉಪ ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕುಂದಾಪುರ ಮಂಡಲ ಉಪಾಧ್ಯಕ್ಷರಾದ ಸುನೀಲ್ ಶೆಟ್ಟಿ ಹೇರಿಕುದ್ರು,ರೂಪಾ ಬಾಬು ಪೈ, ಕುಂದಾಪುರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಓಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಬಳ್ಕೂರು, ರೈತ ಮೋರ್ಚಾ ಅಧ್ಯಕ್ಷ ಜಯಶೀಲ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಪುರಸಭಾ ಮಾಜಿ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಭಾಕರ ವಿ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ, ಕುಂದಾಪುರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಖಾರ್ವಿ, ಸಂಪತ್ ಶೇರಿಗಾರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಪಕ್ಷದ ಮುಖಂಡರಾದ ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ದಿವಾಕರ ಕಡ್ಗಿ, ಜಯಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Categories
ಶಿಕ್ಷಣ

ವಿದ್ಯಾ ಅಕಾಡೆಮಿ ವಾರ್ಷಿಕೋತ್ಸವ

ಮೂಡ್ಲಕಟ್ಟೆ : ಇತ್ತೀಚೆಗೆ ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವ ವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ॥ ಪ್ರೇಮಾನಂದ ಕೆ. ತಾಲೂಕು ಹೆಲ್ತ್ ಆಫೀಸರ್ ಕುಂದಾಪುರ ಇವ್ರು ಆಗಮಿಸಿದ್ದರು. ಹಾಗೆಯೇ ವೇದಿಕೆಯಲ್ಲಿ ಡಾ॥ ರಾಮಕೃಷ್ಣ ಹೆಗ್ಡೆ, ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ , ಹಾಗೂ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಪ್ರಿನ್ಸಿಪಲ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ,ಡಾ. ಪ್ರತಿಭಾ ಪಾಟೀಲ್ ಪ್ರಿನ್ಸಿಪಾಲ್ ಆಫ್ ಐ ಎಂ ಜೆ ಇನ್ಸ್ಟಿಟ್ಯೂಷನ್ , ಸೆಬಾಸ್ಟಿನ್, ಅಕಾಡೆಮಿಸಿನ್ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿ ಇಂದಿನ ಮಕ್ಕಳ ಜೀವನದಲ್ಲಿ ಹೊರಾಂಗಣ ಆಟಗಳ ಅಗತ್ಯತೆ ಅತ್ಯಂತ ಮಹತ್ವದ್ದು ಎಂದು ಒತ್ತಿ ಹೇಳಿದರು. ಹಾಗೆಯೇ ಆಹಾರ ಕ್ರಮದ ಕುರಿತು ಪೋಷಕರಿಗೆ ಮೌಲ್ಯಯುತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಹಿತನುಡಿಯನ್ನಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ನಾಟಕ, ಯಕ್ಷಗಾನದ ಮೂಲಕ ಕಣ್ಮನ ಸೆಳೆದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ರಶ್ಮಾ ಶೆಟ್ಟಿ ವಾರ್ಷಿಕ ವರದಿ ಓದಿದರು, ಸೋಫಿಯಾ ಕಾರ್ವಾಲ್ಲೊ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕಿ ವಿದ್ಯಾ ಅತಿಥಿ ಪರಿಚಯ ಮಾಡಿದರು. ಸುನಿತಾ ರೆಬೆಲ್ಲೊ ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿಯರಾದ ಪದ್ಮಾವತಿ ಮತ್ತು ಪ್ರಜ್ಞಾ ಶೆಟ್ಟಿ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ಶಿಕ್ಷಕಿ ಸ್ವಾತಿ ವಂದಿಸಿದರು.

Categories
ಬ್ರೇಕಿಂಗ್ ನ್ಯೂಸ್

ಶೆಟ್ರಕಟ್ಟೆ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲು ಇಬ್ಬರ ಬಂಧನ

ಕುಂದಾಪುರ: ತಾಲೂಕಿನ ತಲ್ಲೂರು ಮೂಲಕ ನೇರಳಕಟ್ಟೆ-ಆಜ್ರಿ-ಸಿದ್ದಾಪುರ ರಸ್ತೆಯ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಟಿಪ್ಪರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ಬಂಧಿತರು. ಕೆಂಪು ಮಣ್ಣು ಜಾಗದ ಮಾಲಿಕ ಮಂಜುನಾಥ್ ಮೇಲೆಯೂ ಪ್ರಕರಣ ದಾಖಲಾಗಿದೆ.

ಸೋಮವಾರ ಸಂಜೆ 3.45ಕ್ಕೆ ಕುಂದಾಪುರದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡ ಕೆಎಸ್‌ಆರ್‌ಟಿಸಿ ಬಸ್ ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಆಜ್ರಿ ಕಡೆಗೆ ತೆರಳುತ್ತಿದ್ದಾಗ 4:20 ಸುಮಾರಿಗೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್‌ ಬಸ್‌ನ ಬಲ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ 39 ಮಂದಿ ಪ್ರಯಾಣಿಕರ ಪೈಕಿ 18 ಮಂದಿಗೆ ಗಾಯಗಳಾಗಿತ್ತು. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಹಿತ ಮೂರು ಮಂದಿ ತೀವೃ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಈ ಸಂಬಂಧ ಕೆ‌ಎಸ್‌ಆರ್‌ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.

ಟಿಪ್ಪರ್ ಚಾಲಕನು ವಾಹನದಲ್ಲಿ ಮಣ್ಣು ಸಾಗಾಟದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಕೆಂಪು ಮಣ್ಣು ತುಂಬಿಸಿಕೊಂಡು ಕಿರಿದಾದ ರಸ್ತೆಯಲ್ಲಿ ಓಡಿಸಿದ್ದು ಎದುರುನಿಂದ ಬರುವ ವಾಹನಗಳಿಗೆ ಅಪಘಾತವಾಗಿ ಎದುರಿನ ವಾಹನಗಳಲ್ಲಿರುವ ಪ್ರಯಾಣಿಕರಿಗೆ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎನ್ನುವ ಅರಿವಿದ್ದರೂ ಕೂಡ ವಿಮಾ ಪತ್ರ (ಇನ್ಸೂರೆನ್ಸ್), ಪರವಾನಿಗೆ ಇಲ್ಲದ ಟಿಪ್ಪರ್‌‌ನಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವರು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ತೀವೃ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗದಲ್ಲಿರಿಸಲಾಗಿದೆ (ಅಬ್ಸರ್‌ವೇಶನ್) ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಚತುರ್ಥೀ : ತಿಥಿ

ಮಘೆ : ನಕ್ಷತ್ರ

ಬುಧವಾರ

07.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಶಿಕ್ಷಣ

ಎನ್ ಎಂ ಎಂ ಎಸ್ ಪರೀಕ್ಷಾ ತರಬೇತಿ ಕಾರ್ಯಗಾರ

ಕೋಟೇಶ್ವರ : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಎನ್ ಎಂ ಎಂ ಎಸ್ ಪರೀಕ್ಷಾ ತರಬೇತಿ ಕಾರ್ಯಗಾರ ಶಾಲಾ ಚೇತನ ಸಭಾಭವನದಲ್ಲಿ ನಡೆಯಿತು

ಕುಂದಾಪುರ ತಾಲೂಕಿನ ವಿವಿಧ ಪ್ರೌಢಶಾಲೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಎಸ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯವಿರುವ ಜ್ಞಾನವನ್ನು ಪಡೆಯಲು ಪೂರಕವಾದ ಈ ಪರೀಕ್ಷೆ ವಿವಿಧ ವಿಷಯಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಮೂಲಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಶಿಕ್ಷಣದ ಯಶಸ್ಸಿಗೆ ದಾರಿ ದೀಪ ವಾಗಲಿದೆ ಎಂದರು
ಸಂಪನ್ಮೂಲ ವ್ಯಕ್ತಿಗಳಾಗಿ ಉದಯ್ ಕುಮಾರ್ ಶೆಟ್ಟಿ ಹೆಸ್ಕುತ್ತೂರು ಅಜಯ್ ಕುಮಾರ್ ಶೆಟ್ಟಿ ಕಂಡ್ಲೂರು ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು

ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಕೆಪಿಎಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು ಶಿಕ್ಷಣ ಸಂಯೋಜಕ ನಾರಾಯಣ ಮರಾಠಿ ಕಾರ್ಯಾಗಾರದ ಸಂಪೂರ್ಣ ಉಸ್ತುವಾರಿ ವಹಿಸಿದ್ದರು .

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ತೃತೀಯಾ : ತಿಥಿ

ಆಶ್ಲೇಷ : ನಕ್ಷತ್ರ

ಮಂಗಳವಾರ

06.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತ : ಓರ್ವ ಸಾವು

ಕುಂದಾಪುರ: ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತ ಪಟ್ಟರೆ, ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ  ‌ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು-ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ.

 

ಕುಂದಾಪುರದಿಂದ ಆಜಿ-ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಸರ್ಕಾರಿ ಬಸ್ ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಬಸ್ ನ ಬಲ ಬದಿಗೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ಬದಿಯ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.

ಸಂಜೆ ಸಮಯವಾದ್ದರಿಂದ ಬಸ್ ನಲ್ಲಿ ಬಹುತೇಕ ಕಾಲೇಜು ವಿದ್ಯಾರ್ಥಿಗಳಿದ್ದು, ಅವರಿಗೆಲ್ಲ ಗಂಭೀರ ಗಾಯಗಳಾಗಿದೆ. ಸ್ಥಳೀಯ ಯುವಕ ಪ್ರಶಾಂತ್ ಪೂಜಾರಿ ಕರ್ಕಿ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.