Categories
ಶಿಕ್ಷಣ

ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರ

ಮೂಡ್ಲಕಟ್ಟೆ: ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಇತ್ತೀಚೆಗೆ ಎಫ್ ಎಸ್ ಎಲ್ ಇಂಡಿಯಾ ಸಹಯೋಗದೊಂದಿಗೆ ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಾಕೇಶ್ ಸೋನ್ಸ್, ಪ್ರೆಸಿಡೆಂಟ್, ಎಫ್ ಎಸ್ ಎಲ್ ಇಂಡಿಯಾ ಅಂಡ್ ಹಿಸ್ ಟೀಮ್ ಇವರು ಆಗಮಿಸಿ ವಿದ್ಯಾರ್ಥಿಗಳು ಹೇಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಪ್ರತಿ ವಿದ್ಯಾರ್ಥಿಗಳಲ್ಲಿಯೂ ನಾಯಕತ್ವ ಗುಣಗಳಿರುತ್ತದೆ ಅದನ್ನು ಹೇಗೆ ಸಾಮಾಜಿಕ ಅಭಿವೃದ್ಧಿಗೆ ಉಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದರು.

ಈ ಕಾರ್ಯಗಾರದಲ್ಲಿ ಎಫ್ ಎಸ್ ಎಲ್ ಇಂಡಿಯಾ, ಸಿಇಎಲ್ ಕೊರ್ಡಿನೇಟರ್ ಅಂಡ್ ಇಂಚಾರ್ಜ್ ಆದ ಶ್ರೀ ನಾಗರಾಜ್ ಶೆಟ್ಟಿ ಎನ್, ಎಫ್ ಎಸ್ ಎಲ್ ಇಂಡಿಯಾ ವೈಡಿಪಿ ಕೋರ್ಡಿನೇಟರ್ ರಕ್ಷಾ ವಿ ಶೆನೊಯ್ ಕೆ, ಸಿಇಎಲ್ ವಾಲೆಂಟಿರ್ ಫ್ರಮ್ ಜರ್ಮನಿಯಾವಾರಾದ ಆಂಟೋನಿಯಾ ಗ್ರೋಸ್ ಮತ್ತು ಜೋಯೆಲ್ ಫುಮಗಲ್ಲಿ ಇವರುಗಳು ಕೂಡ ಇವರ ಜೊತೆ ಸಹಕರಿಸಿ ಉತ್ತಮವಾದ ತರಬೇತಿಯನ್ನು ನೀಡುವಲ್ಲಿ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

“ನೆತ್ತರ ನೆರವು”ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕುಂದಾಪುರ : ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ ನೊಂದ ಹೃದಯಗಳಿಗೆ ನೆರವಿನ ಹಸ್ತ ಇವರ ಆಯೋಜನೆಯಲ್ಲಿ, ರಕ್ತನಿಧಿ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಸಹಕಾರದೊಂದಿಗೆ,*ವಿರಾಟ್ ಫ್ರೆಂಡ್ಸ್ ಹೊದ್ರಾಳಿ, ಗೆಳೆಯರ ಬಳಗ ಬೀಜಾಡಿ, JCI ಕುಂದಾಪುರ, ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ, ವೀರ ಕೇಸರಿ ಫ಼್ರೆಂಡ್ಸ್ ಕೋಟೇಶ್ವರ* ಇವರ ಸಹಯೋಗದೊಂದಿಗೆ, ದೇಶ ಸೇವೆಯಲ್ಲಿ ನಮ್ಮನ್ನಗಲಿದ ನಮ್ಮೂರಿನ ಹೆಮ್ಮೆಯ ವೀರ ಯೋಧ ಅನೂಪ್ ಪೂಜಾರಿ ಇವರ ಸವಿ‌ ನೆನಪಿನಲ್ಲಿ “ನೆತ್ತರ ನೆರವು”ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಾರದಾ ಕಲ್ಯಾಣ ಮಂಟಪ ಕೋಟೇಶ್ವರ ಇಲ್ಲಿ ಭಾನುವಾರ – ಯಶಸ್ವಿಯಾಗಿ ನೆರವೆರಿತು, ಈ ಒಂದು ಯಶಸ್ವಿ ರಕ್ತದಾನ ಶಿಬಿರದಲ್ಲಿ ಒಟ್ಟು 117 ರಕ್ತದಾನಿಗಳು ಪಾಲ್ಗೊಂಡಿದ್ದು, ಒಟ್ಟು 100 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಜನಪ್ರಿಯ ಶಾಸಕರಾದ ಕಿರಣ್ ಕುಮಾರ ಕೊಡ್ಗಿಯವರು ವಹಿಸಿದ್ದು, ವೀರ ಯೋಧ ಅನೂಪ್‌ ಪೂಜಾರಿಯವರ ಸಹೋದರ ಶಿವರಾಮ್ ಅಮೀನ್ ದೀಪ‌ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಬೀಜಾಡಿ ಮೀನುಗಾರರ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ, ಕೆ.ಎಂ.ಸಿ‌ ಮಣಿಪಾಲ ವೈಧ್ಯರಾದ ಡಾ.ವಿವೇಕ್, ಮಿತ್ರ ಕ್ಲಿನಿಕ್ ಕೋಟೇಶ್ವರ ವೈಧ್ಯರಾದ ಡಾ.ರಾಜೇಶ್, ಕೋಟೇಶ್ವರ ಗ್ರಾ.ಪ ಅಧ್ಯಕರಾದ ಶ್ರೀಮತಿ ರಾಗಿಣಿ ದೇವಾಡಿಗ,ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ,ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ ಅಧ್ಯಕ್ಷರಾದ ವಿಶ್ವನಾಥ್ ಮೊಗವೀರ,ಗೆಳೆಯರ ಬಳಗ ಬೀಜಾಡಿ ಅಧ್ಯಕ್ಷರಾದ ನರಸಿಂಹ ಶ್ರೀಯಾನ್,JCI ಕುಂದಾಪುರ ಅಧ್ಯಕ್ಷರಾದ ರಾಕೇಶ್ ಶೆಟ್ಟಿ,ವೀರ ಕೇಸರಿ ಕೋಟೇಶ್ವರ ಅಧ್ಯಕ್ಷರಾದ ಸಂಪತ್ ಶೇರೆಗಾರ್ ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ ಅಧ್ಯಕ್ಷರಾದ ಅಭಿಷೇಕ್ ಬೀಜಾಡಿ,ಮಿತ್ರ ಸಂಗಮ ಬೀಜಾಡಿ ಗೌರವಾಧ್ಯಕ್ಷರಾದ ವಾದಿರಾಜ್ ಹೆಬ್ಬಾರ್ ಗೋಪಾಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಮಾಜಪರ ಕಾರ್ಯದಲ್ಲಿ ಹೆಸರುವಾಸಿಯಾಗಿರುವ ಇಬ್ಬರು ಸಾಧಕರಾದ ಶ್ರೀಮತಿ ಪ್ರಭಾ ರಾವ್ ಕಲ್ಯಾಣಪುರ ಹಾಗೂ ಶ್ರೀ ಲೋಕೇಶ್ ಅಂಕದಕಟ್ಟೆ ಇವರಿಗೆ ಕಡಲೂರ ಸೇವಕ ಎನ್ನುವ ಬಿರುದನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸುಕನ್ಯಾ ತಲ್ಲೂರು ಕಾರ್ಯಕ್ರಮ‌ ನಿರೂಪಣೆ ಮಾಡಿದರು.ಹೆಲ್ಪಿಂಗ್ ಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಕೋಟೇಶ್ವರ ಧನ್ಯವಾದ ಸಮರ್ಪಿಸಿದರು ಕೋಷಾಧಿಕಾರಿ ಸುನೀಲ್‌ಖಾರ್ವಿ ಸಹಕರಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಬಿದಿಗೆ : ತಿಥಿ

ಶ್ರವಣ : ನಕ್ಷತ್ರ

ಮಂಗಳವಾರ

20.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಶಿಕ್ಷಣ

ಕೈಗಾರಿಕಾ ಕೇಂದ್ರಕ್ಕೆ ಭೇಟಿ

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಕೊಟೇಶ್ವರದ ವಾಣಿಜ್ಯಶಾಸ್ತç ವಿಭಾಗದ ವತಿಯಿಂದ ಅಂತಿಮ ಬಿ.ಕಾಂ. ನ ೫೦ ವಿದ್ಯಾರ್ಥಿಗಳಿಗೆ ವಿವಿಧ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅದರ ಅಧ್ಯಯನವನ್ನು ಮಾಡಲಾಯಿತು.
ಮಣಿಪಾಲದ ಉದಯವಾಣಿ ಮುದ್ರಣಾಲಯ ಮುಖ್ಯಸ್ಥರು ವಿದ್ಯಾರ್ಥಿಗಳ ಈ ಭೇಟಿಯಿಂದ ನೈಜ ಅಧ್ಯಯನ ಹಾಗೂ ಸಮಾಜಮುಖಿಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಉದಯ ಅಲ್ಯುಮೀನಿಯಂ ಘಟಕ ಮಣಿಪಾಲದ ವ್ಯವಸ್ಥಾಪಕರಾದ ಹೇಮಂತ್ ಕುಮಾರ್ ರವರು ಅಲ್ಯುಮೀನಿಯಂ ಹಾಗೂ ಸ್ಟೀಲ್‌ನ ವಿವಿಧ ಪರಿಕರಗಳ ಉತ್ಪಾದನಾ ಹಂತಗಳನ್ನು ಸ್ಥೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಪ್ಪೂರಿನಲ್ಲಿರುವ ಕೆ.ಎಂ.ಎಫ್.ನ ಹಾಲಿನ ಸಂಸ್ಕರಣ ಘಟಕದಲ್ಲಿ ಅಲ್ಲಿಯ ಸಿಬ್ಬಂದಿಯವರು ಹಾಲು ಹಾಗೂ ಅದರ ಸಹ – ಉತ್ಪನ್ನಗಳ ಸಂಸ್ಕರಣೆಯ ವಿವಿಧ ಮಜಲುಗಳನ್ನು ವಿವರವಾಗಿ ತಿಳಿಸಿದರು.
ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಶೇಖರ ಬಿ. ಹಾಗೂ ಉಪನ್ಯಾಸಕರಾದ ಶೃತಿ ಆಚಾರ್ಯ ಎನ್. ಹಾಗೂ ಚೈತ್ರಾ ಹೆಚ್. ಇವರು ಈ ಭೇಟಿಯ ನೇತೃತ್ವ ವಹಿಸಿದರು.

Categories
ಬ್ರೇಕಿಂಗ್ ನ್ಯೂಸ್

ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಮಿನಿ ಟಿಪ್ಪರ್ ಡಿಕ್ಕಿ

ಕುಂದಾಪುರ: ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಗಂಭೀರ ಗಾಯ ಗೊಂಡ ಘಟನೆ ಬಳ್ಕೂರು ಗ್ರಾಮದ ಸಿದ್ದಾಪುರ- ಕುಂದಾಪುರ ರಾಜ್ಯ ಹೆದ್ದಾರಿ 52ರ ರಸ್ತೆಯಲ್ಲಿ ದುರ್ಗಾ ಕ್ಯಾಶ್ಯೂ ಇಂಡಸ್ಟ್ರೀಸ್ ಬಳಿ ಸಂಭವಿಸಿದೆ.ಗಂಭೀರ ಗಾಯಗೊಂಡ ವ್ಯಕ್ತಿ ರುದ್ರ ಪೂಜಾರಿ (52) ಎಂದು ಗುರುತಿಸಲಾಗಿದೆ.

ಮಿನಿ ಟಿಪ್ಪರ್ ಚಾಲಕ ಬಾಜಿಲ್ ಡಿಸೋಜಾ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ರುದ್ರ ಪೂಜಾರಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.
ಸ್ಥಳೀಯರು ಟಿಪ್ಪರನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ರುದ್ರ ಪೂಜಾರಿ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಪಾಡ್ಯ : ತಿಥಿ

ಉತ್ತರಾಷಾಢ : ನಕ್ಷತ್ರ

ಸೋಮವಾರ

19.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಮರಳಲ್ಲಿ ಅರಳಿದ “ನಮ್ಮೂರ ಶಾಲೆ”

ಕುಂದಾಪುರ : ಪಾರಿಜಾತದ ವತಿಯಿಂದ ದಿI ರಾಮಚಂದ್ರ ಭಟ್ ಮತ್ತು ದಿI ಅಹಲ್ಯ ಭಟ್ ಸವಿನೆನಪಿಗಾಗಿ ಕೋಡಿ ಬೀಚ್ ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ.

ಸರಕಾರಿ ಶಾಲಾ ಮಕ್ಕಳ ಧ್ಯೇಯವನ್ನಿಟ್ಟುಕ್ಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯು “ಸ್ಯಾಂಡ್ ಥೀಂ” ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಿಂದ 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿದ್ದು ಇಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

Categories
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅಪವಾದಾತ್ಮಕ ಹೇಳಿಕೆ : 30 ದಿನ ಕಾರಾಗೃಹ ಶಿಕ್ಷೆ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಮತ್ತು ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪವಾದಾತ್ಮಕ ಹೇಳಿಕೆ ನೀಡಿದ್ದ ವಿಠಲ್ ಗೌಡಗೆ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 30 ದಿನ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಮತ್ತು ನಿರಂತರವಾಗಿ ಉಲ್ಲಂಘಿಸಿದ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಕುರಿತು ಅಪವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಅಥವಾ ಪ್ರಕಟಿಸಬಾರದು ಎಂಬಂತೆ ನ್ಯಾಯಾಲಯ ನೀಡಿದ್ದ ಸ್ಪಷ್ಟ ನಿಷೇಧಾಜ್ಞೆ (ಇಂಜಕ್ಷನ್ ಆದೇಶ) ಇದ್ದರೂ, ಆರೋಪಿತ ವಿಟ್ಟಲ್ ಗೌಡ ಅವರು ಅದನ್ನು ಉಲ್ಲಂಘಿಸಿ ಪುನಃಪುನಃ ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ಈ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲ್ಲಿಯಾರು ವಾದ ಮಂಡಿಸಿದ್ದಾರೆ.

Categories
ಶಿಕ್ಷಣ

ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸಂಪನ್ನಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ

ಕಿರಿಮಂಜೇಶ್ವರ: ಬೈಂದೂರು ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಜನವರಿ 17ರಂದು ಬಹಳ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದಂತಹ ಶ್ರೀ ನರಸಿಂಹ ದೇವಾಡಿಗ ಅವರು ವಹಿಸಿಕೊಂಡಿದ್ದು ನಾಯಕತ್ವ ಪ್ರತಿಭೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ ಜೊತೆಗೆ ಉತ್ತಮ ನಾಗರೀಕರನ್ನಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತದೆ ಎಂದು ಹೇಳಿದವರು. ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದಂತಹ ಶೇಖರ್ ಪೂಜಾರಿಯವರು ಉಪಸ್ಥಿತರಿದ್ದು ಜೀವನದಲ್ಲಿ ಕೌಶಲ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದಂತಹ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ರ‍್ಯಾಲಿಯ ಪಕ್ಷಿ ನೋಟವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಮಂಜುನಾಥ್ ಹೆಗಡೆಯವರು ಪ್ರಸ್ತುತಪಡಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ಜನತ ಪದವಿಪೂರ್ವ ಸಂಸ್ಥೆ ಹೆಮ್ಮಾಡಿ ಇದರ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಉದಯ ನಾಯ್ಕ್, ಇಲಾಖೆಯ ಅಧಿಕಾರಿಗಳದ ಉದಯ್ ಕುಮಾರ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ಶ್ರೀಮತಿ ಸುಮಂಗಲ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಯೋಜಕರಾದಂತಹ ಸುಬ್ರಹ್ಮಣ್ಯ ಮರಾಠೆ ಉಪಸ್ಥಿತರಿದ್ದರು.
ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದಿಂದ ನಾವುಂದದವರೆಗೆ ನಡೆದ ರ‍್ಯಾಲಿಗೆ ಬೈಂದೂರು ತಾಲೂಕು ದೈಹಿಕ ಶಿಕ್ಷಣಪರಿವೀಕ್ಷಣಾಧಿಕಾರಿಗಳಾದಂತಹ ವಿಜಯಕುಮಾರ್ ಶೆಟ್ಟ ಇವರು ಚಾಲನೆಯನ್ನು ನೀಡಿದರು. ರ‍್ಯಾಲಿಯಲ್ಲಿ ಪ್ಲಾಸ್ಟಿಕ್ ಬಳಕೆಯ ಪರಿಣಾಮ ಪರಿಸರ ಮಾಲಿನ್ಯವನ್ನು ತಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೆ ಇನ್ನೂ ಹಲವಾರು ಪರಿಸರ ಜಾಗೃತಿಗಳನ್ನು ಮೂಡಿಸುವಂತಹ ಘೋಷಣೆಯೊಂದಿಗೆ ವಿದ್ಯಾರ್ಥಿಗಳ ದಂಡು ಸಾಗಿ ಬಂದಿತು.
ರ‍್ಯಾಲಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಶ್ರೀ ಗಣೇಶ ಮೊಗವೀರರವರು ಶುಭಹಾರೈಸಿದರು.
ರ‍್ಯಾಲಿಯಲ್ಲಿ ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಯಸ್‌ ಡಿ ಎಂ ಮೈಯಾಡಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ಹೀಗೆ ಬೇರೆ ಬೇರೆ ಶಾಲೆಯ ಸುಮಾರು 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಶಿಕ್ಷಕರ ಶಿಕ್ಷಕಿಯರು ಬಹಳ ಲವಲವಿಕೆಯಿಂದ ಇದರಲ್ಲಿ ಭಾಗವಹಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಮುಖವಾಡ ತಯಾರಿಕೆ, ಹೂಗುಚ್ಚ ತಯಾರಿಕೆ , ಬೆಂಕಿ ರಹಿತ ಅಡುಗೆ ತಯಾರಿಕೆ, ಹಾಗೆ ದ್ವಿತೀಯ ಸೋಪಾನದ ಪದಕ ತಯಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀಮತಿ ಸುಮಂಗಲ ಇವರು ನಿರೂಪಿಸಿ ಶ್ರೀ ಉದಯಕುಮಾರ್ ಇವರು ಸ್ವಾಗತಿಸಿ ಶ್ರೀಮತಿ ಅನಿತಾ ಅವರು ವಂದಿಸಿದರು.

Categories
ಇತರೆ

ರಾಮಾಯಣದಲ್ಲಿ ಪ್ರತಿಯೊಬ್ಬರ ಕಣ್ಣಲ್ಲೂ ಎರಡು ಇಂಚು ಕಣ್ಣೀರು ತರಿಸುವಂತಹ ಘಟನೆ

ಲವಕುಶರು ಹುಟ್ಟಿದ ಬಳಿಕ ವಾಲ್ಮೀಕಿ ಅವರೊಡನೆ ಲವಕುಶರು ಶ್ರೀ ರಾಮನ ಆಸ್ಥಾನಕ್ಕೆ ಆಗಮಿಸುತ್ತಾರೆ. ಶ್ರೀರಾಮ ಹೇಳಿದಂತೆ ಆತನ ಆಸ್ಥಾನದಲ್ಲಿ ಸೀತಾಮಾತೆಯು ಪರಿಶುದ್ಧೆ ಎಂದು ಶಪಥ ಮಾಡಲು ಅಣಿಯಾದ ಸಂದರ್ಭ ಆಕೆಯ ಒಂದೊಂದು ಮಾತುಗಳು ಕೂಡ ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸದೆ ಇರಲಾರವು.
ಸಮಗ್ರ ಅಯೋಧ್ಯೆಯ ಪ್ರಜೆಗಳಿಗೆ ನಮಿಸುತ್ತಾ, ನನ್ನ ದೇವರು ಶ್ರೀರಾಮಚಂದ್ರನ ಪಾದಗಳಿಗೆ ನಮಿಸುತ್ತಾ, ರಾಮನ ಕಡೆಗೆ ಮುಖ ಮಾಡಿ ನಿಂತು ಶ್ರೀ ರಾಮನನ್ನು ಉದ್ದೇಶಿಸಿ ಮಹಾಪ್ರಭು ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದೇನೆ. ಅಂತರಾಳದಿಂದ ನೀವು ನನ್ನನ್ನು ಪ್ರೀತಿಸುವುದು ನನಗೆ ವೇದ್ಯವಿದೆ. ಸೂರ್ಯವಂಶದ ಗದ್ದುಗೆಯನ್ನು ಏರಿದ ನೀವು ಹೆಂಡತಿಯ ವಿಷಯದಲ್ಲಿ ನ್ಯಾಯ ನಿಷ್ಟುರತೆಯನ್ನು ಪ್ರದರ್ಶಿಸಲಿಲ್ಲ ಎಂದು ಬರಬಹುದಾದ ಆಪಾದನೆಯನ್ನು ಗಮನಿಸಿ ಲಕ್ಷ್ಮಣನೊಡನೆ ನನ್ನನ್ನು ಕಾಡಿಗೆ ಕಳುಹಿಸಿರುವಿರಿ. ಆ ದುಃಖಕರ ಸನ್ನಿವೇಶವನ್ನು ನಿಮಗೆ ನೋಡಲು ಕಷ್ಟವಾದುದರಿಂದಲೇ ವನಕ್ಕೆ ತೆರಳುವಾಗ ನೀವು ಮುಖ ತೋರಿಸಲೇ ಇಲ್ಲ. ರಾಜಾಜ್ಞೆ ಪ್ರಕಾರ ನಿಮ್ಮ ಮುಂದೆ ನಾನು ಪ್ರತಿಜ್ಞೆ ಮಾಡಿದರು ನಾಳೆಯ ಸಮಾಜ ಇನ್ನೇನು ನಮ್ಮ ವಿಚಾರವಾಗಿ ಹೇಳಬಹುದು ಏನೋ ? ಹಾಗಿರುವಾಗ ನಾನಿದ್ದಷ್ಟು ದಿವಸ ಈ ಅಪವಾದ ತಪ್ಪಿದ್ದಲ್ಲ. ಸ್ವಾಮಿ ಅರೆಕ್ಷಣ ಯೋಚಿಸಿರಿ ನೀವೇ ಈಗ ಸಭೆಯಲ್ಲಿ ಪ್ರಕಟಿಸಿದಂತೆ ದಶಕಂಠನ ವಧೆಯ ತರುವಾಯ ಏಕಪಕ್ಷಿಯವಾಗಿ ನನ್ನನ್ನು ನೀವು ಸ್ವೀಕರಿಸಲಿಲ್ಲ. ನನ್ನ ಪತಿವ್ರತ ಧರ್ಮದಲ್ಲಿ ಕಳಂಕವಿದ್ದರೆ ಯಜ್ಞೇಶ್ವರನು ನನ್ನನ್ನು ದಹಿಸಲಿ ಎಂದು ಪ್ರತಿಜ್ಞೆ ಮಾಡಿ  ಉರಿಯುವ ಅಗ್ನಿಕುಂಡಕ್ಕೆ ಹಾರಿದೆ.
ಕ್ಷಣ ಮಾತ್ರದಲ್ಲಿ ದಹಿಸಬಲ್ಲ ಅಗ್ನಿದೇವನು ನಾನು ಮುಡಿದಿರುವ ಹೂವನ್ನು ಬಾಡಲು ಅವಕಾಶ ಮಾಡಿಕೊಡದೆ ನಿಮಗೆ ನನ್ನನ್ನು ಒಪ್ಪಿಸಿದನಲ್ಲವೇ ? ಮಹಾ ಪತಿವ್ರತಿಯಾದ ಈಕೆಯ ಕೇಶವನ್ನು ಸೋಕಲಾರೆ ಎಂಬುದಾಗಿ ನಿಮ್ಮಲ್ಲೂ ನಿವೇದಿಸಿಕೊಂಡನು ಅಲ್ಲವೇ ? ಹಾ, ಇನ್ನೊಮ್ಮೆ ನನ್ನಿಂದಾಗಿ ನಿಮ್ಮ ಮೇಲೆ ಆಪಾದನೆ. ಆಪಾದನೆಯ ಹೊರೆಯನ್ನು ಹೊತ್ತ ಈ ಆಪಾದಿತಳು ಎಷ್ಟೊಂದು ಸಹಿಸಿಕೊಳ್ಳಬಹುದು? ಇಂದು ನಾನು ಶುದ್ಧಾತ್ಮಳು ಎಂದು ಪ್ರತಿಜ್ಞೆ ಮಾಡಿದರು ಭವಿಷ್ಯದಲ್ಲಿ ಯಾರು ಅಪಸ್ವರ ಎತ್ತಲಾರರು ಎಂಬುದಕ್ಕೆ ಏನು ಆಧಾರ ? ಹೇ ಪ್ರಾಣೇಶ ಧರ್ಮ, ಅರ್ಥ, ಕಾಮಗಳಲ್ಲಿ ಈ ಕ್ಷಣದವರೆಗೆ ನಿಮ್ಮ ಸಹಚರಿಯಾದೆ. ನಿಮ್ಮನ್ನೇ ಅನುಸರಿಸಿದೆ. ಅದೇಕೋ ಇನ್ನು ಸಾಕು ಎಂಬ ಭಾವನೆ ಮನದಲ್ಲಿ ಬೆಳೆಯುತ್ತಿದೆ. ಈ ಅಡ್ಡಗೋಡೆಯನ್ನು ಮುರಿಯುವಷ್ಟು ಸಶಕ್ತಳಲ್ಲ ನಾನು. ಜನಕಿ ಜನನಿಯರ ಋಣವನ್ನು ತೀರಿಸಿದ್ದೇನೆ. ವಿವಾಹವಾಗಿ ಸೇರಿದ ಮನೆಯ ಋಣದಿಂದ ಮುಕ್ತಳಾಗಿದ್ದೇನೆ . ಮಹಾಪ್ರಭು ದೇವತೆಗಳಿಗೆ ಸಮಾನರಾದ ಕುಮಾರ ದ್ವಯರನ್ನು ನಿಮಗೆ ಒಪ್ಪಿಸಿದ್ದೇನೆ. ಪರಮ ಪುನೀತರಾದ ವಾಲ್ಮೀಕಿ ಋಷಿಗಳಿಂದ ಮತ್ತು ಜೀವನದ ಸರ್ವಸ್ವ ಎಂದು ಪ್ರೀತಿಸಿದ ನಿಮ್ಮಿಂದ ವಿದಾಯವನ್ನು ಹೇಳುವ ಸಮಯ ಒದಗಿದೆ . ಸಭಿಕರೇ ಇನ್ನೊಮ್ಮೆ ನಾನು ಸತ್ಯವನ್ನು ದೃಢಪಡಿಸಬೇಕಾದ ಅನಿರೀಕ್ಷಿತ ಸಂದರ್ಭವಿದು. ದಶರಥರಾಯನ ಜೇಷ್ಠ ಪುತ್ರ ಅಯೋಧ್ಯಾ ಅಧಿಪತಿ ಶ್ರೀರಾಮ ಒಬ್ಬರನ್ನೇ ತ್ರಿಕರಣ ಪೂರ್ವಕವಾಗಿ ಆರಾಧಿಸುತ್ತೇನೆ ಹೊರತು ಇನ್ನೊಬ್ಬನನ್ನಲ್ಲ . ಇದು ಪೂರ್ಣವಾದ ಸತ್ಯವಾಗಿರುವುದಾದರೆ ಮಾಧವನ ಸತಿ ಮಾಧವಿಯು ನನ್ನನ್ನು ಸ್ವೀಕರಿಸಲಿ . ನನ್ನ ವಚನಗಳು ಸತ್ಯವಾದರೆ ದರಿತ್ರಿಯು ನನ್ನನ್ನು ಕರೆದೊಯ್ಯಲಿ. ಸೀತಾಮಾತೆಯ ಈ ಮಾತು ಮುಗಿದೊಡನೆ ಭೂದೇವಿಯು ತನ್ನ ಒಡಲಿಂದ ಮೇಲೆ ಬಂದು ಸೀತೆಯನ್ನು ತನ್ನ ಭೂಗರ್ಭದೊಳಗೆ ಸೇರಿಸಿಕೊಂಡಳು. ಒಂದು ಸಲ ಈ ಸಂದರ್ಭವನ್ನು ಓದಿ ನೋಡಿ ಇಂಥವರ ಕಣ್ಣಲ್ಲೂ ಎರಡು ಹನಿ ಕಣ್ಣೀರು ಬರದೆ ಇರಲಾರದು . ಸೀತಾ ಮಾತೆ ಪಂಚ ಪತಿವ್ರತ ಶಿರೋಮಣಿಗಳಲ್ಲಿ ಆಕೆಯು ಒಬ್ಬರು.

ಪ್ರದೀಪ್‌ ಕುಮಾರ್‌ ಕೋಮುಂಜೆ