Categories
ಶಿಕ್ಷಣ

ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಮಾತೃವಂದನಾ ಕಾರ್ಯಕ್ರಮ: ಬೆಳಕಿನ ಮಹತ್ವವನ್ನ ಅರ್ಥಮಾಡ್ಕೊಂಡ್ರೆ, ದೀಪ ಹಚ್ಚೋದ್ರ ಅರ್ಥ ಅರ್ಥವಾಗುತ್ತೆ – ಎನ್. ಆರ್. ದಾಮೋದರ ಶರ್ಮ

ಕುಂದಾಪುರ : ಬೆಳಕು ಜೀವನದ ಸಂಕೇತ, ಕತ್ತಲೆಯ ನಿವಾರಣೆ, ಸಂಬಂಧಗಳ ಬೆಳವಣಿಗೆಗೆ ಕಾರಣ. ನಾವೆಲ್ಲ ಬೆಳಗಬೇಕು, ಬೆಳೆಯಬೇಕು ಅನ್ನೋದೇ ದೀಪ ಪ್ರಜ್ವಲನೆಯ ಮೂಲ ಉದ್ದೇಶ ಎಂದು ಎನ್. ಆರ್. ದಾಮೋದರ ಶರ್ಮ ಬಾರಕೂರು ಅವರು ಹೇಳಿದರು. ಅವರು ಜ.17ರಂದು ಶನಿವಾರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲ್‌ಗೆ ಅಂಟಿಕೊಂಡ್ರೆ ಅವ್ರ ಭವಿಷ್ಯ ಹಾಳಾಗುತ್ತೆ ಶಾಲೆಯ ನಿಯಮಗಳನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳು ಶಿಸ್ತು ಕಲಿಯುತ್ತಾರೆ. ಒಂದು ವೇಳೆ ಶಾಲೆಯ ನಿಯಮ ಪಾಲಿಸದಿದ್ರೆ, ಭವಿಷ್ಯದಲ್ಲಿ ಜೀವನದಲ್ಲಿ ಮುಂದಕ್ಕೆ ಬರೋಕೆ ಕಷ್ಟ ಆಗುತ್ತದೆ. ಆದ್ದರಿಂದ ಪೋಷಕರು ಮತ್ತೆ ಶಿಕ್ಷಕರು ಮಕ್ಕಳನ್ನು ಮೊಬೈಲ್‌ ಯಿಂದ ದೂರವಿಡೋಕೆ ಪ್ರಯತ್ನ ಪಡ್ಬೇಕು ಎಂದು ದಾಮೋದರ ಶರ್ಮಾ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಎಂ. ಹೆಗ್ಡೆ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿ ಮಾತನಾಡಿ ತಂದೆ-ತಾಯಿ ಮಕ್ಕಳಿಗೆ ನೀಡುವ ಕೊಡುಗೆ ಅಪಾರ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಜೊತೆಗೆ, ಗುರು ಹಿರಿಯರನ್ನು ಪೂಜ್ಯ ಭಾವನೆಯಿಂದ ನೋಡುವ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಮಾತನಾಡಿ ನಾವು ಎಲ್ಲಾ ದೇವರುಗಳನ್ನು ಪೂಜಿಸುತ್ತೇವೆ. ಆದರೆ ನಮಗೆ ಕಣ್ಣಿಗೆ ಕಾಣುವ ದೇವರು ಅಂದ್ರೆ ತಂದೆತಾಯಿ.
ಮಕ್ಕಳಿಗೆ ತಂದೆ ತಾಯಿಯರ ಬಗ್ಗೆ ಗೌರವ, ಭಕ್ತಿ ಬೆಳೆಸುವುದು ತುಂಬಾ ಮುಖ್ಯ. ಆದ್ದರಿಂದ ನಮ್ಮ ಈ ಸಂಸ್ಥೆ ಇಂತಹ ಮಾತೃವಂದನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನಾಗರಾಜ್ ಶೆಟ್ಟಿ ಹೇಳಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಪೋಷಕರಾದ ರಮೇಶ್ ಎನ್. ಮತ್ತು ಶ್ರೀಮತಿ ಶಾಂತ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೆ ಚೆಸ್ ಆಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿನಿ ಆರಾಧ್ಯ ಎಸ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸರೋಜಿನಿ ಬಿ ಆಚಾರ್ಯ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಉಪನ್ಯಾಸಕಿ ಶ್ರೀಮತಿ ದಿವ್ಯಾ ಶೆಟ್ಟಿ ನಿರೂಪಿಸಿದರು. ಸಿಬಿಎಸ್ ಸಿ ಸಂಯೋಜಕಿ ಶ್ರೀಮತಿ ವಿಶಾಲ್ ಶೆಟ್ಟಿ ವಂದಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಅಮವಾಸ್ಯೆ : ತಿಥಿ

ಪೂರ್ವಾಷಾಢ : ನಕ್ಷತ್ರ

ಭಾನುವಾರ

18.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಶಿಕ್ಷಣ

ಜನತಾ ಪಿಯು ಹೆಮ್ಮಾಡಿಯಲ್ಲಿ ರೆಡ್ ಕ್ರಾಸ್ ಕಾರ್ಯಗಾರ

ಹೆಮ್ಮಾಡಿ: ರೆಡ್ ಕ್ರಾಸ್ ಮಾನವೀಯನೆಲೆಯಲ್ಲಿ ಕೆಲಸ ಮಾಡುವ ದೊಡ್ಡ ಸಂಸ್ಥೆ, ಬೇರೆ ಸಂಸ್ಥೆಗಳಿಂದ ಭಿನ್ನವಾಗಿರುವ ರೆಡ್ ಕ್ರಾಸ್ ದೇಶದ ಉದ್ದಗಲಕ್ಕೂ ಹಲವಾರು ಜನಪರ, ಜನಹಿತ ಕಾರ್ಯಗಳನ್ನು ಮಾಡಿದೆ, ರೆಡ್ ಕ್ರಾಸ್ ಸಂಸ್ಥೆಯ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕದ ಚೇರ್ ಮೆನ್ ಜಯಕರ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕ, ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಸರೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಡಾ. ಸೋನಿ ಡಿಕಾಸ್ಟ್ ರವರು ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರಥಮ ಚಿಕಿತ್ಸೆ ಹೇಗೆ ಮಾಡುವುದು ಅದರ ಪ್ರಥಮ ಹಂತದ ಕಾರ್ಯಗಳು ಯಾವುವು, ತೆಲೆಸುತ್ತಿ ಬಿದ್ದವ್ಯಕ್ತಿ ಗೆ ಯಾವ ರೀತಿ ಪ್ರಾಥಮಿಕ ಹಂತದಲ್ಲಿ ಪ್ರಥಮ ಚಿಕಿತ್ಸೆ ನೀಡಬೇಕು, ಕರೆಂಟ್ ಶಾಕ್ ಹೊಡೆದ ವ್ಯಕ್ತಿಗಳನ್ನು ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬ ಹಲವು ವಿಷಯಗಳ ಕುರಿತು ಅರ್ಥಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕದ ಟ್ರಸರರ್ ಶಿವರಾಮ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲರಾದ ರಮೇಶ್ ಪೂಜಾರಿ,ಹೆಮ್ಮಾಡಿಯ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕರಾದ ಅಲ್ತಾರು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಚತುರ್ದಶಿ : ತಿಥಿ

ಮೂಲ : ನಕ್ಷತ್ರ

ಶನಿವಾರ

17.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಪರ್ಯಾಯ ಮಹೋತ್ಸವದ ಹೊರ ಕಾಣಿಕೆ : ವಾಹನಕ್ಕೆ ಚಾಲನೆ ನೀಡಲಾಯಿತು

ಕುಂದಾಪುರ : ಉಡುಪಿ ಶ್ರೀ ಕೃಷ್ಣ ಮಠದ ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಕುಂದಾಪುರದ ವಿವಿಧ ಭಾಗಗಳಿಂದ ಕ್ರೂಡಿಕರಿಸಿದ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟೆಹೊಳೆ ಅವರು ಉಪಸ್ಥಿತಿಯಲ್ಲಿ ಕುಂಭಾಶಿ ಆನೆಗುಡ್ಡೆಯ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ರಮಣ ಉಪಾಧ್ಯಾಯ ಅವರು ಕುಂಭಾಶಿ ಆನೆಗುಡ್ಡೆಯ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು.

ಉಡುಪಿಯ ಶ್ರೀ ಕೃಷ್ಣ ಮಠದ ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಕುಂದಾಪುರದ ವಿವಿಧ ಭಾಗಗಳಿಂದ ಕ್ರೂಡಿಕರಿಸಿದ ಹಸಿರು ಹೊರೆ ಕಾಣಿಕೆ ವಾಹನ ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆ ಭಾಗದಿಂದ ಕುಂಭಾಶಿ ಆನೆಗುಡ್ಡೆಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸಿ ಪ್ರಸಾದವನ್ನು ವಿತರಿಸಿದರು, ಶಿರೂರು ಪರ್ಯಾಯ ಮಹೋತ್ಸವಕ್ಕೆ ಬೈಂದೂರು ಶಾಸಕರು ಶುಭವನ್ನ ಹಾರೈಸಿದರು

ಈ ಸಂದರ್ಭದಲ್ಲಿ ಕುಂಭಾಶಿ ಆನೆಗುಡ್ಡೆಯ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ಸೂರ್ಯನಾರಾಯಣ ಉಪಾಧ್ಯಾಯ, ಹೊರೆ ಕಾಣಿಕೆ ಸಮಿತಿಯ ಸಂಚಾಲಕ ರಾಜೇಶ್ ಕಾವೇರಿ, ಸಹ ಸಂಚಾಲಕ ಶಂಕರ್ ಅಂಕದಕಟ್ಟೆ , ಕುಂದೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ವಾಸುದೇವ ಯಡಿಯಾಳ ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಲಕ್ಷ್ಮೀಶ್ ಹವಾಲ್ದಾರ್ , ಕುಂದಾಪುರ ಖಾರ್ವಿಕೆರಿ ಮಹಾಕಾಳಿ ದೇವಸ್ಥಾನದ ಉಪಾಧ್ಯಕ್ಷ ಪ್ರಕಾಶ್ ಖಾರ್ವಿ ಪರ್ಯಾಯ ಹೊರೆ ಕಾಣಿಕೆ ಸಮಿತಿಯ ಪ್ರಮುಖರಾದ ಯು ಎಸ್.ಶೆಣೈ ಹಾಗೂ ಧಾರ್ಮಿಕ ಕ್ಷೇತ್ರದ ಮುಖಂಡರು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ಭಕ್ತ ಸಮುದಾಯದವರು ಇನ್ನಿತರರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಮಂಜುನಾಥ ಭಂಡಾರಿ ಗ್ರಾಮ ಪಂಚಾಯತ್ ಭೇಟಿ ಕೇವಲ ಚುನಾವಣಾ ಗಿಮಿಕ್ : ದಿನಕರ ಬಾಬು

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು ಕೇವಲ ಚುನಾವಣಾ ಗಿಮಿಕ್ ಅಲ್ಲದೆ ಮತ್ತೇನು ಅಲ್ಲ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬಬೇಕಾದ ಸರಕಾರ ನಿರ್ಲಕ್ಷ್ಯ ವಹಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆಗಳ ದುರಸ್ತಿ, ಮರಳು, ಕೆಂಪು ಕಲ್ಲು ಸಮಸ್ಯೆ, ವಸತಿ ಮಂಜೂರಾತಿ, ಪಡಿತರ ಚೀಟಿ, ಆರೋಗ್ಯ ಸೇವೆ ಸೇರಿದಂತೆ ಜನಸಾಮಾನ್ಯರ ಕಷ್ಟಗಳಿಗೆ ಸರಕಾರ ಯಾವುದೇ ಸ್ಪಂದನೆ ಇಲ್ಲ.

ಗ್ರಾಮೀಣ ಭಾಗದಲ್ಲಿ ಏಕ ವಿನ್ಯಾಸ, 9 & 11 ಮಂಜೂರಾತಿಗೆ ಕಠಿಣ ಕಾನೂನು ರಚನೆ, ಮನೆ ನಿರ್ಮಾಣ ಪರವಾನಿಗೆಗೆ ಪರದಾಟ, ಸರಕಾರಿ ಬಸ್ ಗಳಿಗೆ ಬೇಡಿಕೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಕಿವಿಗೊಡದ ಸರಕಾರದ ನಡವಳಿಕೆಯ ಬಗ್ಗೆ ಮಂಜುನಾಥ ಭಂಡಾರಿ ಅವರು ಮಾತನಾಡಲಿ.

ಉಡುಪಿ ಜಿಲ್ಲೆಗೆ ಅನುದಾನ ಹಾಗೂ ಸೌಕರ್ಯ ನೀಡುವಲ್ಲಿ ಮಲತಾಯಿ ಧೋರಣೆಯೊಂದಿಗೆ ತಾರತಮ್ಯ ಎಸಗುತ್ತಿರುವ ಹಾಗೂ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿರುವ ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ವಿಧಾನ ಪರಿಷತ್ ಸದಸ್ಯರು ಉತ್ತರಿಸಲಿ. ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ಜಿಲ್ಲೆಗೆ ನೀಡಿದ ಅನುದಾನಗಳ ಪಟ್ಟಿಯೊಂದಿಗೆ ಭಂಡಾರಿಯವರು ಚರ್ಚಿಸಲಿ.

ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು ಮುಂಬರುವ ಚುನಾವಣೆಗಳನ್ನು ಗಮದಲ್ಲಿಟ್ಟುಕೊಂಡು ನಡೆಸುತ್ತಿರುವ ಕಾಟಾಚಾರದ ಸಭೆ ಎಂಬುದು ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಅರಿವಿದ್ದು, ಇಂತಹ ಸಭೆಗಳಿಂದ ಜನ ಸಾಮಾನ್ಯರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ದಿನಕರ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಹಟ್ಟಿಯಂಗಡಿ : ಮೇಳದಲ್ಲಿ ಲೈಟಿಂಗ್ ಮಾಡಿ ಕೊಂಡಿದ್ದ ವ್ಯಕ್ತಿ ನಾಪತ್ತೆ

ಕುಂದಾಪುರ: ಹಟ್ಟಿಯಂಗಡಿ ಸಿದ್ಧಿವಿನಾಯಕ ಯಕ್ಷಗಾನ ಮೇಳದಲ್ಲಿ ಲೈಟಿಂಗ್ ಕೆಲಸ ಮಾಡಿ ಕೊಂಡಿದ್ದ ಬ್ರಹ್ಮಾವರ ತಾಲೂಕಿನ ಕುದಿ ಗ್ರಾಮದ ನಿವಾಸಿ ಸೂರ್ಯ(32) ಕಾಣೆಯಾಗಿದ್ದಾರೆ.

ಜ.12 ರಂದು ಸಂಜೆ ಕರೆ ಮಾಡಿದಾಗ ತಾನು ಉಪ್ಪಿನಕುದ್ರುವಿನಲ್ಲಿ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿರುವುದಾಗಿ ಅವರು ತಿಳಿಸಿದ್ದರು.ಬಳಿಕ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಅಪ್ ಆಗಿತ್ತು.

ಸೂರ್ಯ ಅವರ ಪತ್ನಿ ನೇತ್ರಾವತಿ(33) ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ತ್ರಯೋದಶಿ : ತಿಥಿ

ಮೂಲ : ನಕ್ಷತ್ರ

ಶುಕ್ರವಾರ

16.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಸ್ನಾನಕ್ಕೆ ಹೋದ ಯುವಕ :ಕಾಲು ಜಾರಿ ನೀರಿಗೆ ಬಿದ್ದು ಸಾವು

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಸೀತಾ ನದಿಯ ಡ್ಯಾಮ್ ಬಳಿ ಸ್ನಾನಕ್ಕೆ ಹೋದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.

ಪಿರ್ಯಾಧಿ ಶಿವರಾಮ ರಾಯ (57) ನಡೂರು ಗ್ರಾಮ, ಬ್ರಹ್ಮಾವರ ಇವರ ತಂಗಿ ಪದ್ಮಾವತಿ ಇವರ ಮಗ ದೇವರಾಜ 35 ನಡೂರು ಬಳಿ ಇರುವ ಸೀತಾ ನದಿಯ ಡ್ಯಾಂ ಬಳಿ ದಿನಾಂಕ: 13/01/2026 ರಂದು ಸಂಜೆ ಸುಮಾರು 4:00 ಗಂಟೆಗೆ ಸ್ನಾನಕ್ಕೆ ಹೋದವರು ನದಿಯಲ್ಲಿ ಸ್ನಾನ ಮಾಡುತ್ತೀರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯು.ಡಿ.ಆರ್ 03/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Categories
ಇತರೆ

ಓಂಕಾರ ಪದ ಹೇಳಿದ ಕೂಡಲೇ ಮೈ ರೋಮಾಂಚನವಾಗುತ್ತದೆ

ಓಂಕಾರ ಇದರ ಮೂಲವನ್ನು ಹುಡುಕುತ್ತಾ ಹೋದರೆ ಪ್ರಕೃತಿಯಲ್ಲಿ ರಚಿತವಾಗಿರುವ ಪ್ರಕೃತಿಯಲ್ಲಿ ಅಡಕವಾಗಿರುವ ಪ್ರಕೃತಿಯ ಭಾವನೆ ಆಗಿರುವ ಓಂಕಾರ ಉದಯವಾಗುವುದು ಸೂರ್ಯನ ಗರ್ಭದಲ್ಲಿ . ಅದಕ್ಕೆ ಸೂರ್ಯನನ್ನು ಓಂಕಾರೇಶ್ವರ ಎಂದು ಕರೆಯುತ್ತಾರೆ . ಪ್ರಕೃತಿ ಪಂಚಭೂತಗಳಿಂದ ಕೂಡಿದೆ . ಪಂಚಭೂತಗಳಿಂದ ಕೂಡ ಹೊರ ಸೂಸುವುದು ಓಂಕಾರನಾದ . ಓಂಕಾರ ರೂಪದಿಂದಲೇ ಸಮುದ್ರದ ಆಳ ತಿಳಿಯುವುದು . ಗಾಳಿಯ ಶಬ್ದ ಓಂಕಾರ. ನೀರಿನ ಶಬ್ದ ಓಂಕಾರ . ಬೆಳಕಿನ ಶಬ್ದ ಓಂಕಾರ . ಆಕಾಶದಲ್ಲಿರುವ ಮೋಡಗಳು ಓಂಕಾರ. ಪ್ರಕೃತಿಯ ಭಾಷೆಯೇ ಓಂಕಾರ.
ಓಂಕಾರವಿಲ್ಲದ ಜಾಗವಿಲ್ಲ . ಓಂಕಾರ ಬೀಜಾಕ್ಷರ ಪ್ರಕೃತಿ ಎಂಬ ದೇವರ ಭಾಷೆಯ ಮೂಲ ಮಂತ್ರ. ಎಲ್ಲಾ ಅಕ್ಷರಗಳ ಮೂಲ ಓಂಕಾರ . ಅಧ್ಯಾತ್ಮದ ಸಾಕ್ಷಾತ್ಕಾರ ಓಂಕಾರ . ಅಮ್ಮ ಎಂಬ ಪದದ ಮಮಕಾರದ ಮೂಲ ಮಂತ್ರ ಓಂಕಾರ . ಸಂಗೀತದ ಭಾಷೆಯು ಓಂಕಾರ . ವಿಶ್ವವನ್ನು ಆಳುವಂತಹ ಪ್ರಕೃತಿಯ ಭಾಷೆ ಓಂಕಾರ . ಜ್ಞಾನದ ಮೂಲ ಮಂತ್ರ ಓಂಕಾರ . ಧ್ಯಾನದ ಮೂಲ ಮಂತ್ರ ಓಂಕಾರ . ಓಂಕಾರ ಎಂದ ಕೂಡಲೇ ನರನಾಡಿಗಳೆಲ್ಲ ರೋಮಾಂಚನಗೊಂಡು ಮನಸ್ಸು ತನ್ನ ಶಾಂತ ರೂಪದಲ್ಲಿ ನೆಲೆಸುತ್ತದೆ. ಹೀಗಿದೆ ಓಂಕಾರದ ದಿವ್ಯರೂಪದ ಮಹತ್ವ.

ಪ್ರದೀಪ್‌ ಕುಮರ್ ಕೋಮುಂಜೆ